ಲೇಡಿಸ್ ವಾಶ್ ರೂಂ ಒಳಗಿದ್ದ ಮಹಿಳೆಯ ಫೋಟೊ ತೆಗೆಯಲು ಮುಂದಾದ ವ್ಯಕ್ತಿ
ಭಾನುವಾರ, 3 ಜನವರಿ 2021 (07:52 IST)
ಮುಂಬೈ : ರೆಸ್ಟೋರೆಂಟ್ ನ ಲೇಡಿಸ್ ವಾಶ್ ರೂಂ ಒಳಗೆ ಮಹಿಳೆಯೊಬ್ಬಳಿಗೆ 38 ವರ್ಷದ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ ಘಟನೆ ಛತ್ರಪತಿ ಶಿವಾಜಿ ಟರ್ಮಿನಸ್ ಬಳಿ ನಡೆದಿದೆ.
ಮಹಿಳೆ ಶೌಚಾಲಯದ ಒಳಗೆ ಇದ್ದಾಗ ಆರೋಪಿ ತನ್ನ ಮೊಬೈಲ್ ಫೋನ್ ನಿಂದ ಫೋಟೊ ತೆಗೆಯಲು ಯತ್ನಿಸಿದ್ದಾನೆ. ಆ ವೇಳೆ ಮಹಿಳೆ ನೋಡಿದ ಕಾರಣ ಮೊಬೈಲ್ ಬಿಟ್ಟು ಪರಾರಿಯಾಗಲು ಯತ್ನಿಸಿದಾಗ ಆತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಈ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆಯ ವೇಳೆ ಆರೋಪಿ ರೆಸ್ಟೋರೆಂಟ್ ಪಕ್ಕದಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂಬುದಾಗಿ ತಿಳಿದುಬಂದಿದೆ.ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.