ಸಾಕು ನಾಯಿ ಕಚ್ಚಿದ್ದಕ್ಕೆ ಮಾಲಕಿ ಅರೆಸ್ಟ್

ಗುರುವಾರ, 6 ಜನವರಿ 2022 (10:05 IST)
ಚೆನ್ನೈ: ಸಾಕು ನಾಯಿಯೊಂದು ಬಾಲಕಿಗೆ ಕಚ್ಚಿ ಗಂಭೀರ ಗಾಯಗೊಳಿಸಿದ ಕಾರಣಕ್ಕೆ ಪೊಲೀಸರು ಮಾಲಕಿಯನ್ನು ಬಂಧಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಜರ್ಮನ್ ಶೆಫರ್ಡ್ ಜಾತಿಯ ನಾಯಿ ಬಾಲಕಿಯನ್ನು ಅಟ್ಟಾಡಿಸಿಕೊಂಡು ಹೋಗಿ 16 ಬಾರಿ ಕಚ್ಚಿದ್ದರಿಂದ ಆಕೆಗೆ ಗಂಭೀರ ಗಾಯವಾಗಿದೆ. ಈ ಹಿನ್ನಲೆಯಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿ ಕಚ್ಚುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಘಟನೆ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಸಿಸಿಟಿವಿ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು, ಮಾಲಕಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ