ಇಣುಕಿ ನೋಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯ ಕೊಲೆ

ಗುರುವಾರ, 6 ಜನವರಿ 2022 (08:50 IST)
ರಾಜ್ ಕೋಟ್: ತಮ್ಮ ಮನೆಗೆ ಇಣುಕಿ ನೋಡುತ್ತಿದ್ದ ಇಬ್ಬರನ್ನು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಗುಜರಾತ್ ನಲ್ಲಿ ಈ ಘಟನೆ ನಡೆದಿದೆ.

ಪದೇ ಪದೇ ತಮ್ಮ ಮನೆ ಕಡೆಗೆ ಇಣುಕಿ ನೋಡುತ್ತಿದ್ದ ಕಾರಣಕ್ಕೆ ಮಹಿಳೆ ಇಬ್ಬರು ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಳು. ಇದಕ್ಕೆ ಆಕ್ರೋಶಗೊಂಡ ಆರೋಪಿಗಳು ಆಕೆಯ ಕೂದಲು ಹಿಡಿದೆಳೆದು ರಸ್ತೆಗೆ ಕರೆತಂದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಈ ವೇಳೆ ಆಕೆಯ ಪತಿ ಮನೆಯಲ್ಲಿರಲಿಲ್ಲ. ನೆರೆಹೊರೆಯವರು ಪತಿಗೆ ವಿಷಯ ತಿಳಿಸಿದ್ದು, ಮನೆಗೆ ಬಂದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಸಲಾಗಲಿಲ್ಲ. ಇದೀಗ ಆರೋಪಿಗಳು ತಲೆಮರೆಸಿಕೊಂಡು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ