ಕೇರಳ: ಮುಂದಿನ ಮುಖ್ಯಮಂತ್ರಿಯಾಗಿ ಪಿ.ವಿಜಯನ್ ಆಯ್ಕೆ

ಶುಕ್ರವಾರ, 20 ಮೇ 2016 (14:47 IST)
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್‌ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹಿರಿಯ ಸಿಪಿಎಂ ನಾಯಕ ಪಿನರಾಯಿ.ವಿಜಯನ್ ಆಯ್ಕೆಯಾಗಿದ್ದಾರೆ.
 
ಸಿಪಿಎಂ ಕೇಂದ್ರ ಕಚೇರಿಯಲ್ಲಿ 72 ವರ್ಷ ವಯಸ್ಸಿನ ಪಿ.ವಿಜಯನ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. 
 
ಇಂದು ಸಂಜೆ 4 ಗಂಟೆಗೆ ವಿಜಯನ್ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
 
83 ವರ್ಷ ವಯಸ್ಸಿನ ಅಚ್ಯುತಾನಂದನ್ ಅವರಿಗೆ ಪಕ್ಷ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಮಾಹಿತಿ ನೀಡಿದಾಗ, ಅವರ ಅಸಮಾದಾನದಿಂದ ಸಭೆಯನ್ನು ಮಧ್ಯದಲ್ಲಿಯೇ ಬಿಟ್ಟು ವಾಪಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನೇತೃತ್ವದಲ್ಲಿ ಸಿಪಿಎಂ ಪಾಲಿಟ್‌ಬ್ಯೂರೋ ಕೇಂದ್ರ ಸಮಿತಿ ಮತ್ತು ಕೇರಳ ರಾಜ್ಯ ಘಟಕದ ಸಮಿತಿ ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಂಡಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ