'ಪೇಟಿಎಮ್' ಜಾಹೀರಾತಲ್ಲಿ ಪ್ರಧಾನಿ ಮೋದಿ, ನಾಚಿಕೆಗೇಡು: ಕೇಜ್ರಿವಾಲ್
ಶುಕ್ರವಾರ, 11 ನವೆಂಬರ್ 2016 (15:00 IST)
ಖಾಸಗಿ ಆನ್ಲೈನ್ ಪೇಮೆಂಟ್ ಸಂಸ್ಥೆ ಪೇಟಿಮ್ ಜಾಹೀರಾತಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡಿರುವುದು ನಾಚಿಕೆಗೇಡಿನ ವಿಷಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದ್ದಾರೆ.
ಇದು ಸಂಪೂರ್ಣವಾಗಿ ನಾಚಿಕೆಗೇಡಿನ ವಿಷಯ. ತಮ್ಮ ಪ್ರಧಾನಿ ಖಾಸಗಿ ಕಂಪನಿಗೆ ರೂಪದರ್ಶಿ ಆಗಬೇಕೆಂದು ಜನರು ಬಯಸುತ್ತಾರಾ? ನಾಳೆ ಈ ಕಂಪನಿಗಳು ತಪ್ಪೆಸಗಿದರೆ ಅವರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಘೋಷಣೆ ( ದೊಡ್ಡಮುಖಬೆಲೆ ಹಣದ ರದ್ದು)ಯ ದೊಡ್ಡ ಫಲಾನುಭವಿ ಈ ಪೇಟಿಎಮ್. ಮರುದಿನವೇ ಪ್ರಧಾನಿ ಇದರ ಜಾಹೀರಾತಲ್ಲಿ ಕಾಣಿಸಿಕೊಳ್ಳುತ್ತಾರೆ. ಮಿಸ್ಟರ್ ಪಿಎಂ ಏನಿದರ ಅರ್ಥ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
500, 1,000 ಮುಖಬೆಲೆ ನೋಟುಗಳ ಮೇಲೆ ನಿಷೇಧ ಹೇರಿರುವುದನ್ನು ತುಘಲಕ್ ಆದೇಶ ಎಂದು ಜರಿದಿದ್ದ ಆಪ್ ದೊಡ್ಡ ಮಟ್ಟದ ಉದ್ಯಮಪತಿಗಳಿಗೆ ಲಾಭವನ್ನುಂಟು ಮಾಡುವ ಉದ್ದೇಶದಿಂದ ಮಾಡಿದ್ದು ಎಂದು ಹೇಳಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ