ಪ್ರಧಾನಿ ಮೋದಿಗೆ ಆಸ್ಕರ್ ಅವಾರ್ಡ್ ನೀಡಲು ಒತ್ತಾಯಿಸಿದ ಆರ್ ಜಿವಿ
ಸೋಮವಾರ, 24 ಮೇ 2021 (10:15 IST)
ಹೈದರಾಬಾದ್ : ಪ್ರಧಾನಿ ಮೋದಿ ಅವರು ಶುಕ್ರವಾರ ಜನರನ್ನುದ್ದೇಶಿಸಿ ಮಾತನಾಡುವಾಗ ಕೊರೊನಾದಿಂದ ಸಾವನಪ್ಪಿದವರನ್ನು ನೆನೆದು ಕಣ‍್ಣೀರಿಟ್ಟಿದ್ದಾರೆ. ಇದಕ್ಕೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವ್ಯಂಗ್ಯ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಕಣ್ಣೀರು ಸುರಿಸಿದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪ್ರತಿಪಕ್ಷದವರು ಅಭೂತಪೂರ್ವ ಬಿಕ್ಕಟ್ಟಿನ ವೇಳೆ ರಾಷ್ಟ್ರವನ್ನು ವಿಫಲಗೊಳಿಸಿದ ಪ್ರಧಾನಿ ಮೋದಿ ಈಗ ಜನರನ್ನು ನಾಟಕೀಯತೆಯಿಂದ ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ನಡುವೆ ಈ ಬಗ್ಗೆ ಕಾಮೆಂಟ್ ಮಾಡಿದ ಆರ್ ಜಿವಿ, ಪ್ರಧಾನಿ ಮೋದಿಗೆ ಆಸ್ಕರ್ ಅವಾರ್ಡ್ ನೀಡಬೇಕೆಂದು ತಿಳಿಸಿ, ಆಸ್ಕರ್ ಪ್ರಶಸ್ತಿ ಪ್ರದಾನದ ವಿಡಿಯೋವನ್ನು ಪೋಸ್ಟ್ ಮಾಡಿ ಇದನ್ನು ಪ್ರಧಾನಿ ಮೋದಿಯವರ ವಿಳಾಸದಲ್ಲಿ ಪ್ರಕಟಿಸಿದ್ದಾರೆ.