ಒಂದೇ ವರ್ಷದಲ್ಲಿ ಬರೋಬ್ಬರಿ ಇಷ್ಟು ಹಣ ಕಳೆದುಕೊಂಡ ಪ್ರಧಾನಿ ಮೋದಿ!

ಮಂಗಳವಾರ, 18 ಸೆಪ್ಟಂಬರ್ 2018 (10:25 IST)
ನವದೆಹಲಿ: ದೇಶದಾದ್ಯಂತ ಡಿಜಿಟಲ್ ಇಂಡಿಯಾ ಮತ್ತು ಕ್ಯಾಶ್ ಲೆಸ್ ಇಂಡಿಯಾಕ್ಕೆ ಉತ್ತೇಜನ ನೀಡಬೇಕೆಂದು ಪ್ರತಿಪಾದಿಸುವ ಪ್ರಧಾನಿ ಮೋದಿ ಅದನ್ನು ಅಕ್ಷರಶಃ ಪಾಲಿಸಿದ್ದಾರೆ.

ಕಳೆದ ವರ್ಷ ಅವರ ಬಳಿ 1,50,000 ರೂ.ಗಳಷ್ಟು ನಗದು ಇತ್ತು. ಆದರೆ ಈ ವರ್ಷ ಅದು ಶೇ. 67 ರಷ್ಟು ಕಡಿಮೆಯಾಗಿದೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ. ಪ್ರಧಾನಿ ಮೋದಿ ಒಟ್ಟು ಆಸ್ತಿ 2.28 ಕೋಟಿ ರೂ.ಗಳು ಎಂದೂ ವಾಹಿನಿ ಲೆಕ್ಕಾಚಾರ ಹಾಕಿದೆ. ಇದರಲ್ಲಿ ಚರಾಸ್ಥಿ ಮತ್ತು ಗಾಂಧಿ ನಗರದಲ್ಲಿ 1 ಕೋಟಿ ರೂ. ಮೌಲ್ಯದ ಜಮೀನು ಕೂಡಾ ಸೇರಿದೆಯಂತೆ.

ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ಯಾವುದೇ ಕಾರು ಅಥವಾ ಮೋಟಾರು ವಾಹನ ಇಟ್ಟುಕೊಂಡಿಲ್ಲ. ಪ್ರಧಾನಿಯಾದ ಬಳಿಕ ಇದುವರೆಗೆ ಯಾವುದೇ ಚಿನ್ನಾಭರಣ ಖರೀದಿಸಿಲ್ಲ. ಅವರ ಬಳಿ ಇರುವುದು ಕೇವಲ ನಾಲ್ಕು ಚಿನ್ನದ ಉಂಗುರಗಳು ಮಾತ್ರವಂತೆ. ಅಲ್ಲದೆ ಯಾವುದೇ ಸಾಲವನ್ನೂ ಮಾಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ