ಇಂದು ಪ್ರಧಾನಿ ಮೋದಿ ಜನ್ಮದಿನ: ಆಚರಣೆ ಎಲ್ಲಿ ಗೊತ್ತಾ?
ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಶಾಲಾ ಮಕ್ಕಳೊಂದಿಗೆ ಮೋದಿ ಜನ್ಮದಿನ ಆಚರಣೆ ಮಾಡಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವಾರಣಾಸಿಯಲ್ಲಿ ಭರ್ಜರಿ ಸಿದ್ಧತೆ ಕೈಗೊಳ್ಳಲಾಗಿದೆ.
ಇಂದು ಅಪರಾಹ್ನ ವಾರಣಾಸಿಗೆ ಮೋದಿ ಆಗಮಿಸುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ, ತಾವು ದತ್ತು ಪಡೆದ ಜಯಪುರ, ನಾಗೇಪುರ್ ಮತ್ತು ಕಕ್ರಾಹಿಯಾ ಗ್ರಾಮಗಳಿಗೂ ಪ್ರಧಾನಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೀವನಾಧಾರಿತ ಚಲೋ ಜೀತೇಂ ಹಂ ಸಾಕ್ಷ್ಯ ಚಿತ್ರದ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಇನ್ನು ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು, ಜನ ಸಾಮಾನ್ಯರು ಶುಭಾಷಯ ಕೋರಿದ್ದಾರೆ.