ಇಂದಿರಾ ಗಾಂಧಿ ದಾಖಲೆಯನ್ನು ಮುರಿದ ಪ್ರಧಾನಿ ಮೋದಿ

Krishnaveni K

ಶುಕ್ರವಾರ, 25 ಜುಲೈ 2025 (09:47 IST)
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ದಾಖಲೆಯನ್ನು ಇಂದು ಪ್ರಧಾನಿ ಮೋದಿ ಮುರಿದಿದ್ದಾರೆ. ಅಷ್ಟಕ್ಕೂ ಆ ದಾಖಲೆಯೇನು ಇಲ್ಲಿದೆ ನೋಡಿ ವಿವರ.

ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ದಾಖಲೆ ಮಾಡಿದ್ದರು. ಈ ಮೂಲಕ ನೆಹರೂ ಬಳಿಕ ಮೂರನೇ ಸತತವಾಗಿ ಮೂರನೇ ಅವಧಿಗೆ ಪ್ರಧಾನಿಯಾದ ದಾಖಲೆ ಮಾಡಿದ್ದರು. ಇದೀಗ ಸತತ ಅವಧಿಗೆ ಪ್ರಧಾನಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ದಾಖಲೆಯನ್ನು ಮಾಡಿ ಇಂದಿರಾ ಗಾಂಧಿ ದಾಖಲೆಯನ್ನು ಮುರಿದಿದ್ದಾರೆ.

ಇಂದಿಗೆ ಮೋದಿ ಪ್ರಧಾನಿಯಾಗಿ 4078 ದಿನಗಳಾಗಿವೆ. ಈ ಮೂಲಕ ಇಂದಿರಾ ಗಾಂಧಿಯವರ 4077 ದಿನಗಳ ದಾಖಲೆಯನ್ನು ಮುರಿದಿದ್ದಾರೆ. ಇಂದಿರಾ ಗಾಂಧಿಯವರು 1966 ರ ಜನವರಿ 24 ರವರೆಗೆ 1977 ರ ಮಾರ್ಚ್ 24 ರವರೆಗೆ ಸತತ ಪ್ರಧಾನಿ ಹುದ್ದೆಯಲ್ಲಿದ್ದರು. ಈ ದಾಖಲೆಯನ್ನು ಈಗ ಮೋದಿ ಮುರಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ