India Pakistan: 1971 ರ ಭಾರತ, ಪಾಕಿಸ್ತಾನ ಯುದ್ಧದ ವೇಳೆ ಅಮೆರಿಕಾ ಪಾಕಿಸ್ತಾನ ಪರ ನಿಂತಿದ್ದೇಕೆ

Krishnaveni K

ಸೋಮವಾರ, 12 ಮೇ 2025 (08:52 IST)
ನವದೆಹಲಿ: 1971 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಅಮೆರಿಕಾ ಬಹಿರಂಗವಾಗಿಯೇ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಇದಕ್ಕೆ ಕಾರಣವೇನು ಗೊತ್ತಾ?

1971 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಯುದ್ಧಕ್ಕೆ ಬಂದಿತ್ತು. ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿತ್ತು. ಆಗ ಭಾರತೀಯ ಸೇನೆ ಪಾಕಿಸ್ತಾನದ ಬಹುತೇಕ ಭೂಭಾಗವನ್ನು ತನ್ನದಾಗಿಸಿಕೊಂಡಿತ್ತು. ಪೂರ್ವ ಪಾಕಿಸ್ತಾನ ಎಂಬುದು ಬಾಂಗ್ಲಾದೇಶ ರಾಷ್ಟ್ರವಾಗಿ ಉದಯವಾಗಿದ್ದೂ ಆಗಲೇ.

ಭಾರತೀಯ ಸೇನೆ ಯಾವ ರೀತಿ ಮುಗಿಬಿದ್ದಿತ್ತು ಎಂದರೆ ಪಾಕಿಸ್ತಾನ 90 ಸಾವಿರಕ್ಕೂ ಅಧಿಕ ಸೇನಾ ಬಲ ಯುದ್ಧ ಖೈದಿಗಳಾಗಿ ಶರಣಾಗಬೇಕಾಯಿತು.ವಿಪರ್ಯಾಸವೆಂದರೆ ಆಗಲೂ ಭಾರತ ಮಾನವೀಯತೆಗೆ ಕಟ್ಟು ಬಿದ್ದು ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಿದ್ದಲ್ಲದೆ, ಈಗಿನ ಪಾಕಿಸ್ತಾನದ ಭೂಭಾಗವನ್ನು ಮರಳಿಸಿತು.

ಅಂದಿನ ಯುದ್ಧದ ವೇಳೆ ರಷ್ಯಾ ಭಾರತಕ್ಕೆ ಬೆಂಬಲವಾಗಿ ನಿಂತಿದ್ದರೆ ಅಮೆರಿಕಾ ಪಾಕಿಸ್ತಾನದ ಪರವಾಗಿ ನಿಂತಿತ್ತು. ಅಮೆರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಭಾರತದ ಮೇಲೆ ಒತ್ತಡ ಹಾಕಿ ಕದನ ವಿರಾಮ ಘೋಷಿಸುವಂತೆ ಮಾಡಲು ಇನ್ನಿಲ್ಲದಂತೆ ಸಾಹಸಪಟ್ಟಿದ್ದರು. ಆದರೆ ಆಗಿರಲಿಲ್ಲ.

ಅಮೆರಿಕಾಗೆ ಆಗ ಇದ್ದಿದ್ದು ರಷ್ಯಾ ಭಯ. ಆಗ ಜಗತ್ತಿನಲ್ಲಿ ದೇಶ ದೇಶಗಳ ನಡುವೆ ಶೀತಲ ಸಮರ ಜಾರಿಯಲ್ಲಿತ್ತು. ದಕ್ಷಿಣ ಏಷ್ಯಾದಲ್ಲಿ ಎಲ್ಲಿ ತನ್ನ ಪ್ರತಿಸ್ಪರ್ಧಿ ರಷ್ಯಾ ಆಧಿಪತ್ಯ ಸಾಧಿಸಿಬಿಡುತ್ತೋ ಎನ್ನುವ ಆತಂಕ ಅಮೆರಿಕಾದ್ದಾಗಿತ್ತು. ಇದೇ ಕಾರಣಕ್ಕೆ ಅಂದು ಅಮೆರಿಕಾ ಪಾಕಿಸ್ತಾನವನ್ನು ಬೆಂಬಲಿಸಿತು. ಆದರೆ ಅಂದಿನ ಯುದ್ಧದಲ್ಲಿ ಭಾರತದ ತಾಕತ್ತು ನೋಡಿದ ಮೇಲೆ ಅಮೆರಿಕಾ ನಿಧಾನವಾಗಿ ಭಾರತದ ಜೊತೆ ಬಾಂಧವ್ಯ ವೃದ್ಧಿಯ ಕೆಲಸಕ್ಕೆ ಮುಂದಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ