ಚಂದ್ರಯಾನ 2: ವ್ಯಾಪ್ತಿ ಪ್ರದೇಶದಿಂದ ಹೊರ ಹೋದ ವಿಕ್ರಮ

ಶನಿವಾರ, 7 ಸೆಪ್ಟಂಬರ್ 2019 (09:48 IST)
ಬೆಂಗಳೂರು: ಭಾರತೀಯರು ಕುತೂಹಲದಿಂದ ಕಾಯುತ್ತಿದ್ದ ಚಂದ್ರಯಾನ 2 ಲ್ಯಾಂಡಿಂಗ್ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ. ಇನ್ನೇನು ಚಂದ್ರನ ತಲುಪಲು 2.1 ಕಿ.ಮೀ. ದೂರವಿದೆ ಎನ್ನುವಾಗ ರೋವರ್ ವಿಕ್ರಮ ಸಂವಹನ ಕಡಿದುಕೊಂಡಿದೆ.


ಇದರಿಂದಾಗಿ ನಿನ್ನೆ ಇನ್ನೇನು ಚಂದ್ರನ ನೆಲಮುಟ್ಟಲಿರುವ ಕ್ಷಣಗಳನ್ನು ನೋಡಲು ಕಾಯುತ್ತಿದ್ದ ಕೋಟ್ಯಂತರ ಭಾರತೀಯರ ನಿರೀಕ್ಷೆ ನಿರಾಸೆಯಲ್ಲಿ ಕೊನೆಯಾಯಿತು. ಪ್ರಧಾನಿ ಮೋದಿ ಕೂಡಾ ಈ ಸಂಭ್ರಮದ ಕ್ಷಣಗಳನ್ನು ಕಣ‍್ತುಂಬಿಕೊಳ್ಳಲು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಉಪಸ್ಥಿತರಿದ್ದರು.

ಚಂದ್ರನ ಮೇಲ್ಮೈಯಿಂದ 30 ಕಿ.ಮೀ. ಎತ್ತರದಿಂದ ಕೆಳಗಿಳಿಯಲು ಆರಂಭಿಸಿದ ವಿಕ್ರಮ ಆರಂಭದಲ್ಲಿ ಪ್ರತಿ ಸೆಕೆಂಟಿಗೆ 1640 ಮೀ. ವೇಗ ಹೊಂದಿತ್ತು. ಬಳಿಕ ವೇಗ ತಗ್ಗಿಸಿಕೊಳ್ಳುತ್ತಾ ಬಂತು. ಆದರೆ ಇನ್ನೇನು 2.1 ಕಿ.ಮೀ. ಎತ್ತರದಲ್ಲಿ ಇದೆ ಎನ್ನುವಾಗ ಸಂಪರ್ಕ ಕಡಿದುಕೊಂಡಿತು. ಇದರಿಂದಾಗಿ ಇಸ್ರೋದಲ್ಲಿ ಕಾತುರದಿಂದ ಕಾಯುತ್ತಿದ್ದ ವಿಜ್ಞಾನಿಗಳ ಮುಖ ಸಪ್ಪಗಾಗಿ ಹೋಯಿತು. ಇದೀಗ ಮರಳಿ ಸಿಗ್ನಲ್ ಕಂಡುಕೊಳ್ಳಲು ವಿಜ್ಞಾನಿಗಳು ಪ್ರಯತ್ನ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ