ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರಕಾರ ಕೇವಲ ಪ್ರಚಾರಕ್ಕಾಗಿ ಕೋಟಿ ಕೋಟಿ ಹಣ ವೆಚ್ಚ ಮಾಡುತ್ತಿದೆ. ಆದರೆ, ದೇಶದ ಜನತೆಯ ಜೀವನ ಸುಧಾರಣೆಗಾಗಿ ನಯಾಪೈಸೆ ಕೂಡಾ ವೆಚ್ಚ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಟೆಲಿವಿಜನ್ನಲ್ಲಿ ಹೀರೋ ಸಾಧನೆಯಲ್ಲಿ ಝೀರೋ. ಮೋದಿ ಅಧಿಕಾರಕ್ಕೆ ಬಂದ ನಂತರ ಸರಕಾರದ ಹಣ ದೋಚಲಾಗಿದೆ. ದಲಿತರ, ರೈತರ, ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳಲ್ಲಿ ಹೆಚ್ಚಳವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ತಿರುಗೇಟು ನೀಡಿದ್ದಾರೆ.
ಯುಪಿಎ ಸರಕಾರದ ಆಧಾರ ಕಾರ್ಡ್, ಜಿಎಸ್ಟಿ ಮಸೂದೆ, ಜನಧನ ಯೋಜನೆ ಸೇರಿದಂತೆ ಇತರ ಯೋಜನೆಗಳನ್ನು ತಾವೇ ಜಾರಿಗೆ ತಂದಿದ್ದಾಗಿ ಮೋದಿ ಸರಕಾರ ಬಿಂಬಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಲೇವಡಿ ಮಾಡಿದ್ದಾರೆ.