ಕ್ಯಾಂಟೀನ್ ನಲ್ಲಿ ಪ್ರಧಾನಿ ಮೋದಿ ಊಟ: 3.5 ಗಂಟೆ ನಿದ್ರೆ, 6 ಗಂಟೆ ಮೇಲೆ ಮೋದಿ ಊಟ ಮಾಡಲ್ಲ!

Krishnaveni K

ಶನಿವಾರ, 10 ಫೆಬ್ರವರಿ 2024 (08:42 IST)
Photo Courtesy: Twitter
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸಹ ಸಂಸದರೊಂದಿಗೆ ಸಂಸತ್ ನ ಕ್ಯಾಂಟೀನ್ ನಲ್ಲಿ ಊಟ ಮಾಡಿದ ಕ್ಷಣ ಈಗ ಎಲ್ಲೆಡೆ ವೈರಲ್ ಆಗಿದೆ.

ಕಲಾಪದಲ್ಲಿ ಭಾಗಿಯಾದ ಮೋದಿ ಭೋಜನ ವಿರಾಮದ ವೇಳೆಗೆ ಕೆಲವು ಸಂಸದರನ್ನು ಕರೆದುಕೊಂಡು ಸೀದಾ ಕ್ಯಾಂಟೀನ್ ಗೆ ತೆರಳಿದ್ದಾರೆ. ಪ್ರಧಾನಿ ತಮ್ಮನ್ನು ಕ್ಯಾಂಟೀನ್ ಗೆ ಕರೆದುಕೊಂಡು ಹೋಗಿದ್ದು ನೋಡಿ ಸಂಸದರಿಗಂತೂ ತೀರಾ ಅಚ್ಚರಿಯಾಗಿದೆ. ಬಳಿಕ ಅವರ ಜೊತೆ ಹಾಸ್ಯ ಚಟಾಕಿ ಹಾರಿಸುತ್ತಾ ಮೋದಿ ಸಾಮಾನ್ಯರಂತೇ ಊಟ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.

ಪ್ರಧಾನಿ ಕರೆಗೆ ಅಚ್ಚರಿಗೊಳಗಾದ ಸಂಸದರು
ಮಧ‍್ಯಾಹ್ನದ ವೇಳೆಗೆ ಕೆಲವು ಸಂಸದರನ್ನು ಕರೆದ ಮೋದಿ ಬನ್ನಿ ಈವತ್ತು ನಿಮಗೊಂದು ಪನಿಶ್ ಮೆಂಟ್ ಕೊಡುತ್ತೇನೆ ಎಂದು ಲಿಫ್ಟ್ ನಲ್ಲಿ ಕರೆದೊಯ್ದರು. ಎಲ್ಲರೂ ಎಲ್ಲಿಗೆ ಕರೆದೊಯ್ಯುತ್ತಿದ್ದಾರೋ ಎಂಬ ಕುತೂಹದಲ್ಲಿದ್ದರು. ಲಿಫ್ಟ್ ಬಾಗಿಲು ತೆಗೆದಾಗ ಎಲ್ಲರೂ ಕ್ಯಾಂಟೀನ್ ನ ಮುಂದಿದ್ದರು. ನಮ್ಮನ್ನು ಯಾಕೆ ಇಲ್ಲಿಗೆ ಕರೆದರು ಎಂದು ಸಂಸದರಿಗೂ ಅಚ್ಚರಿಯಾಗಿತ್ತಂತೆ.

ಆದರೆ ಮೋದಿ ಎಲ್ಲರ ಜೊತೆಗೆ ಕೂತು ದಾಲ್, ಖಿಚಡಿ, ಲಡ್ಡು ಊಟ ಮಾಡಿದರು. ಊಟದ ಜೊತೆಗೆ ಸಂಸದರೊಂದಿಗೆ ಮಾತನಾಡುತ್ತಾ ಕಾಲ ಕಳೆದರು. ಈ ವೇಳೆ ಸಂಸದರು ಪ್ರಧಾನಿಗೆ ದೈನಂದಿನ ಚಟುವಟಿಕೆ ಬಗ್ಗೆ ಕೇಳಿದರು. ನಾವು ಪ್ರಧಾನಿಯೊಂದಿಗೆ ಕುಳಿತಿದ್ದೇವೆ ಎಂದು ಭಾವನೆಯೇ ಬರಲಿಲ್ಲ ಎಂದು ಸಂಸದರೊಬ್ಬರು ಹೇಳಿದ್ದಾರೆ. ಈ ವೇಳೆ ತಾವು ದಿನದಲ್ಲಿ ಎಷ್ಟು ಗಂಟೆ ನಿದ್ದೆ ಮಾಡುತ್ತೇನೆ, ಎಷ್ಟು ಗಂಟೆಗೆ ಊಟ ಎಂಬಿತ್ಯಾದಿ ವಿವರಗಳನ್ನೂ ಮೋದಿ ಹೊರಹಾಕಿದ್ದಾರೆ. ದಿನಕ್ಕೆ 3.5 ಗಂಟೆ ನಿದ್ರೆ ಮಾಡುತ್ತೇನೆ. 6 ಗಂಟೆ ಮೇಲೆ ಆಹಾರ ಸ್ವೀಕರಿಸಲ್ಲ ಎಂದಿದ್ದಾರೆ.

ಈ ಸೌಹಾರ್ದ ಊಟದ ಮೀಟ್ ನಲ್ಲಿ ಟಿಡಿಪಿಯ ರಾಮ್ ಮೋಹನ್ ನಾಯ್ಡು, ಬಿಎಸ್ ಪಿಯ ರಿತೇಶ್ ಪಾಂಡೆ, ಬಿಜೆಪಿಯ ಜಮ್ಯಾಂಗ್ ನಮ್ಗ್ಯಾಲ್, ಸಚಿವ ಎಲ್ ಮುರುಗನ್, ಬಿಜೆಡಿಯ ಸಸ್ಮಿತ್ ಪಾತ್ರ, ಬಿಜೆಪಿಯ ಹೀನಾ ಗವಿತ್ ಜೊತೆ ಮೋದಿ ಊಟ ಸವಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ