ಪ್ರಧಾನಿಯಾದ ಬಳಿಕ ಒಂದು ದಿನವೂ ರಜೆ ಹಾಕಿಲ್ಲ 'ಮೋದಿ'

ಬುಧವಾರ, 12 ಅಕ್ಟೋಬರ್ 2016 (10:40 IST)
ಕಾರ್ಯವ್ಯಸನಿ ಸ್ವಭಾವ ಮತ್ತು ಬಿಡುವಿಲ್ಲದ ಕೆಲಸದಿಂದ ಗುರುತಿಸಿಕೊಳ್ಳುವ ಮೋದಿ, ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡಾಗಿನಿಂದ ಒಂದು ದಿನವೂ ರಜೆಯನ್ನೇ ಪಡೆದಿಲ್ಲವಂತೆ. ಮಾಹಿತಿ ಹಕ್ಕು ಅರ್ಜಿಗೆ ಬಂದ ಉತ್ತರವೊಂದು ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ. 
ಭಾರತದ ಪ್ರಧಾನಿ ಎಲ್ಲ ಸಂದರ್ಭಗಳಲ್ಲೂ ಕರ್ತವ್ಯ ನಿರತರಾಗಿಯೇ ಇರುತ್ತಾರೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರಿಸಿದೆ. 
 
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರೊಬ್ಬರು ದೇಶದ ಪ್ರಧಾನಿ ಮತ್ತು ಅವರ ಸಚಿವ ಸಂಪುಟಕ್ಕೆ ರಜೆಯ ನಿಯಮಗಳು ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಪ್ರತಿಯನ್ನು ಅಪೇಕ್ಷಿಸಿದ್ದರು. 
 
ಅದಕ್ಕೆ ಉತ್ತರಿಸಿರುವ ಪ್ರಧಾನಿ ಕಾರ್ಯಾಲಯ ಎಲ್ಲಾ ಸಮಯದಲ್ಲೂ ಕೆಲಸಕ್ಕೆ ಹಾಜರಾಗಿರುತ್ತಾರೆ ಎಂದು ಪ್ರತಿಕ್ರಿಯಿಸಿದೆ. 
 
ಅರ್ಜಿದಾರ ಹಿಂದಿನ ಪ್ರಧಾನಿಗಳಾದ ಮನಮೋಹನ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಹೆಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್, ಪಿ,ವಿ.ನರಸಿಂಹ ರಾವ್, ಚಂದ್ರಶೇಖರ್, ವಿ.ಪಿ.ಸಿಂಗ್ ಮತ್ತು ರಾಜೀವ್ ಗಾಂಧಿ ತೆಗೆದುಕೊಂಡ ರಜೆಗಳ ಕುರಿತು ಸಹ ಮಾಹಿತಿ ಕೇಳಿದ್ದರು. ಇದಕ್ಕೆ ಹಿಂದಿನ ಪ್ರಧಾನಿಗಳ ರಜೆ ದಾಖಲೆ ಕಚೇರಿಯಲ್ಲಿಲ್ಲ ಎಂದು ಕಾರ್ಯಾಲಯ ಉತ್ತರಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ