ದೀದಿ ತವರಲ್ಲಿ ಪ್ರಧಾನಿ ಮೋದಿ: ನಮೋಗೆ ಪ್ರತಿಭಟನೆಯ ಸ್ವಾಗತ

ಭಾನುವಾರ, 12 ಜನವರಿ 2020 (09:26 IST)
ಕೋಲ್ಕೊತ್ತಾ: ಪೌರತ್ವ ಖಾಯಿದೆ ವಿಚಾರವಾಗಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಎರಡು ದಿನಗಳ ಪಶ್ಚಿಮ ಬಂಗಾಲ ಯಾತ್ರೆ ಕೈಗೊಂಡಿದ್ದಾರೆ.


ನಿನ್ನೆ ದೀದಿ ತವರಿಗೆ ಬಂದಿಳಿದ ಪ್ರಧಾನಿ ಮೋದಿ ಇಂದೂ ಕೂಡಾ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ವಿಶೇಷವೆಂದರೆ ನಿನ್ನೆ ಸಂಜೆ ಪ್ರಧಾನಿ ಮೋದಿ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದಾರೆ.

ಪೌರತ್ವ ಖಾಯಿದೆ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಮಮತಾ ಆಕ್ರೋಶಗೊಂಡಿರುವ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದಿದೆ. ಇಂದೂ ಕೂಡಾ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೋದಿ ದೆಹಲಿಗೆ ಮರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ