ಭಾಷಣ ಮಾಡುವಾಗ ತಪ್ಪು ಮಾಹಿತಿ ಕೊಟ್ಟರೇ ಪ್ರಧಾನಿ ಮೋದಿ?
ಬುಧವಾರ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣದ ನಡುವೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜೈಲಿನಲ್ಲಿದ್ದಾಗ ನೆಹರೂ ಕುಟುಂಬದ ಯಾರೊಬ್ಬರೂ ಅವರನ್ನು ಭೇಟಿಯಾಗಲಿಲ್ಲ ಎಂದಿದ್ದರು. ಇದೀಗ ಚರ್ಚೆಗೆ ಕಾರಣವಾಗಿದೆ.
ಮೋದಿ ತಪ್ಪಾಗಿ ಹೇಳಿದ್ದಾರೆ. ಅಸಲಿಗೆ ಜವಹರ್ ಲಾಲ್ ನೆಹರೂ ಭಗತ್ ಸಿಂಗ್ ರನ್ನು ಭೇಟಿ ಮಾಡಿದ್ದಲ್ಲದೆ, ಅವರ ಬಗ್ಗೆ ಲೇಖನವನ್ನೂ ಬರೆದಿದ್ದರು. ಇತಿಹಾಸ ಗೊತ್ತಿಲ್ಲದೇ ರಾಜಕೀಯ ಕಾರಣಕ್ಕೆ ಏನೇನೋ ಮಾತನಾಡಬೇಡಿ ಎಂದು ಕೆಲವರು ಟ್ವಿಟರ್ ನಲ್ಲಿ ಪ್ರಧಾನಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.