ಮೋದಿ ಟೀಂನ ಪ್ರಮುಖ ಹೊಸ ಸದಸ್ಯರ ಪಟ್ಟಿ ಇಲ್ಲಿದೆ

ಗುರುವಾರ, 8 ಜುಲೈ 2021 (09:10 IST)
ನವದೆಹಲಿ: ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಹೊಸದಾಗಿ ರಾಜ್ಯದ ನಾಲ್ವರು ಸೇರಿದಂತೆ ಒಟ್ಟು 36 ಹೊಸ ಮುಖಗಳು ಸೇರಿದಂತೆ 43 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮುಖ ಸಚಿವರ ಪಟ್ಟಿ ಇಲ್ಲಿದೆ ನೋಡಿ.


ಶೋಭಾ ಕರಂದ್ಲಾಜೆ-ಕೃಷಿ ಮತ್ತು ರೈತ ಕಲ್ಯಾಣ (ಸಹಾಯಕ ಸಚಿವೆ)
ಎ.ನಾರಾಯಣಸ್ವಾಮಿ- ಸಾಮಾಜಿಕ ನ್ಯಾಯ (ಸಹಾಯಕ ಸಚಿವ)
ರಾಜೀವ್ ಚಂದ್ರಶೇಖರ್-(ಕೌಶಾಲಾಭಿವೃದ್ಧಿ)
ಭಗವಂತ್ ಖೂಬಾ- (ಹೊಸ ಮತ್ತು ನವೀಕರಿಸಬಹುದಾದ ಇಂಧ, ರಾಸಾಯನಿಕ, ರಸಗೊಬ್ಬರ ಖಾತೆ ಸಹಾಯಕ ಸಚಿವ)
ಮನಸುಖ ಮಾಂಡವಿಯ (ಆರೋಗ್ಯ, ರಾಸಾಯನಿಕ-ರಸಗೊಬ್ಬರ)
ಧರ್ಮೇಂದ್ರ ಪ್ರಧಾನ್-(ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ)
ಅಶ್ವಿನಿ ವೈಷ್ಣವ್- ರೈಲ್ವೇ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ
ಜ್ಯೋತಿರಾಧಿತ್ಯ ಸಿಂಧಿಯಾ-ನಾಗರಿಕ ವಿಮಾನಯಾನ
ಸರ್ಬಾನಂದ ಸೊನೊವಾಲ್- ಆಯುಷ್, ಬಂದರು, ಜಲಸಾರಿಗೆ
ಅನುರಾಗ್ ಠಾಕೂರ್-ಕ್ರೀಡೆ, ಯುವಜನ ವ್ಯವಹಾರಗಳು
ಅನುಪಮಾ ದೇವಿ-ಶಿಕ್ಷಣ (ಸಹಾಯಕ ಸಚಿವೆ)
ಮೀನಾಕ್ಷಿ ಲೇಖಿ-ವಿದೇಶಾಂಗ ವ್ಯವಹಾರ (ಸಹಾಯಕ)
ಗಿರಿರಾಜ್ ಸಿಂಗ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಇದರೊಂದಿಗೆ ಮೋದಿ ಸಂಪುಟಕ್ಕೆ ಇಬ್ಬರು ಸಂಪುಟ ಸಚಿವೆಯರು ಸೇರಿದಂತೆ 11 ಮಂದಿ ಮಹಿಳಾ ಸಚಿವೆಯರು ಸೇರ್ಪಡೆಯಾಗಿದ್ದಾರೆ. ಸಂಪುಟದಲ್ಲಿ ಪ್ರದೇಶವಾರು ಮನ್ನಣೆ ನೀಡಲಾಗಿದ್ದು, ಎಲ್ಲಾ ಜಾತಿ, ವರ್ಗದವರ ಪ್ರತಿನಿಧಿಗಳನ್ನೂ ಪರಿಗಣಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ