ಪುಟಾಣಿ ಮಗುವಿನ ಜತೆ ಪ್ರಧಾನಿ ಮೋದಿ ಆಟ! ಫೋಟೋ ವೈರಲ್

ಬುಧವಾರ, 24 ಜುಲೈ 2019 (08:04 IST)
ನವದೆಹಲಿ: ಪ್ರಧಾನಿ ಮೋದಿ ತಮ್ಮ ರಾಜಕೀಯ ಬಿಟ್ಟು ವೈಯಕ್ತಿಕ ಸಮಯ ಕಳೆಯುವ ಫೋಟೋಗಳು ತೀರಾ ಕಡಿಮೆ. ಆದರೆ ಇದೀಗ ಪ್ರಧಾನಿಯ ಹೊಸದೊಂದು ಫೋಟೋ ಇನ್ ಸ್ಟಾಗ್ರಾಂ ಪುಟದಲ್ಲಿ ವೈರಲ್ ಆಗಿದೆ.


ಸಂಸತ್ ಭವನದ ತಮ್ಮ ಕಚೇರಿಯಲ್ಲಿ ಹಾಲುಗಲ್ಲದ ಕಂದಮ್ಮನನ್ನು ತೊಡೆಯಲ್ಲಿರಿಸಿಕೊಂಡು ಆಡುತ್ತಿರುವ ಫೋಟೋವನ್ನು ಪ್ರಧಾನಿ ಮೋದಿ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.

ಜತೆಗೆ ‘ಈವತ್ತು ಒಬ್ಬ ಸ್ಪೆಷಲ್ ಫ್ರೆಂಡ್ ನನ್ನನ್ನು ಭೇಟಿ ಮಾಡಲು ಸಂಸತ್ ಗೆ ಬಂದಿದ್ದಾನೆ’ ಎಂದಷ್ಟೇ ಬರೆದುಕೊಂಡಿದ್ದಾರೆ. ಆ ಮುದ್ದು ಮಗುವನ್ನು ನೋಡಿ ಮನಸೋತ ನೆಟ್ಟಿಗರು ಈ ಮಗು ಯಾರೆಂದು ಪ್ರಶ್ನೆಗಳ ಸುರಿಮಳೆ ಹಾಕಿದ್ದಾರೆ. ಆದರೆ ಇದಕ್ಕೆ ಯಾವುದಕ್ಕೂ ಉತ್ತರ ಬಂದಿಲ್ಲ. ಹಾಗಿದ್ದರೂ ಆ ಮುದ್ದಾದ ಫೋಟೋಗೆ ಹಲವರು ಲೈಕ್, ಕಾಮೆಂಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ