ಬಜೆಟ್‌2019: ಬಜೆಟ್‌ನಲ್ಲಿ ಕೃಷಿಕರಿಗೆ ಬಂಪರ್ ಘೋಷಣೆ

ಶುಕ್ರವಾರ, 5 ಜುಲೈ 2019 (13:04 IST)
ಬಜೆಟ್ 2019: ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮೊತ್ತ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದೆ.
ವಿತ್ತಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಿದ್ದು ಇದೊಂದು ಜನಪರ ಬಜೆಟ್. ಬಜೆಟ್‌ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
 
 
ಲಘು ಹೂಡಿಕೆ ಕೃಷಿಗೆ ಹೆಚ್ಚಿನ ಆದ್ಯತೆ. 
 
ಕೃಷಿ ಆಧಾರಿತ ಉದ್ಯಮಗಳಲ್ಲಿ ಖಾಸಗಿ ಸಹಭಾಗಿತ್ವದ ಹೂಡಿಕೆ.
 
ಕೃಷಿಕರಿಗೆ ಅಗತ್ಯವಾದ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಕೃಷಿ ಸಂಘ ಸ್ಥಾಪನೆಗೆ ಚಿಂತನೆ
 
 ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ ಐವತ್ತು ಸಾವಿರ ಜನರಿಗೆ ನೆರವು.
 
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ, ಪಿಎಂಜಿಎಸ್ ವೈ ಯೋಜನೆ ಗ್ರಾಮೀಣ ಜನರಲ್ಲಿ ಬದಲಾವಣೆ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ