ಸೀಮಿತ ದಾಳಿ ಪೋಸ್ಟರ್‌: ಪ್ರಧಾನಿ ಮೋದಿ ಎಚ್ಚರಿಕೆ ನಿರ್ಲಕ್ಷಿಸಿದ ಬಿಜೆಪಿ ನಾಯಕರು

ಗುರುವಾರ, 6 ಅಕ್ಟೋಬರ್ 2016 (16:47 IST)
ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ನಡೆದ ಸೀಮಿತ ದಾಳಿಯ ಬಗ್ಗೆ ಸಚಿವರು ಹೇಳಿಕೆ ನೀಡುವುದು ಬೇಡ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ  ಸಚಿವ ಸಂಪುಟ ಸಭೆಯಲ್ಲಿ ಸಲಹೆ ನೀಡಿದ್ದರೂ ಅವರ ಮಾತಿಗೆ ಮನ್ನಣೆ ನೀಡದ ಬಿಜೆಪಿ ನಾಯಕರು ಸೀಮಿತ ದಾಳಿಯ ಬಗ್ಗೆ ನಗರಾದ್ಯಂತ ಪೋಸ್ಟರ್‌‌ಗಳನ್ನು ಲಗತ್ತಿಸಿದ್ದಾರೆ.
 
ಉತ್ತರಪ್ರದೇಶದ ಬಿಜೆಪಿ ನಾಯಕರು, ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ನಡುವೆ ಸೇನಾ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ನಗರಾದ್ಯಂತ ಹಂಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಲಕ್ನೋದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿಯೇ ಪ್ರಧಾನಿ ಆದೇಶ ಉಲ್ಲಂಘಿಸಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ನಡುವೆ ಸೇನಾ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಲಗತ್ತಿಸಲಾಗಿದೆ. 
 
ಮುಂದಿನ ವರ್ಷದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಅವರು ಪಾಲ್ಗೊಳ್ಳುವ ಹಲವಾರು ಕಾರ್ಯಕ್ರಮಗಳಿವೆ. ಇದರಿಂದಾಗಿ ಬಿಜೆಪಿ ನಾಯಕರು ಮೋದಿ ಮತ್ತು ಪರಿಕ್ಕರ್ ಪೋಸ್ಟರ್ ಸಮರ ಸಾರಿದ್ದಾರೆ. 
 
ಪಾಕಿಸ್ತಾನ ಆಕ್ರಮಿತ ಕಾಶ್ಮಿರದ ಮೇಲೆ ಭಾರತೀಯ ಸೇನಾಪಡೆಗಳು ಸೀಮಿತ ದಾಳಿ ನಡೆಸಿ, ಹಲವಾರು ಉಗ್ರರನ್ನು ಹತ್ಯೆಗೈದಿದ್ದರಿಂದ ಉತ್ತೇಜಿತಗೊಂಡ ಬಿಜೆಪಿ ಕಾರ್ಯಕರ್ತರು ನಗರಾದ್ಯಂತ ಸಂಭ್ರಮಚಾರಣೆಯಲ್ಲಿ ತೊಡಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ