ಪಾಟ್ನಾ: ಬಿಹಾರದ ಪಾಟ್ನಾದಲ್ಲಿರುವ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಪ್ರಧಾನಿ ಮೋದಿ ಸಿಖ್ಖರ ಪೇಟ ಧರಿಸಿ ಭಕ್ತರಿಗೆ ಊಟ ಬಡಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚುನಾವಣೆ ಪ್ರಚಾರ ನಿಮಿತ್ತ ಮೋದಿ ಪಾಟ್ನಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರಕ್ಕೆ ಆಗಮಿಸಿದ್ದಾರೆ. ಮೋದಿ ಆಗಮನ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರದ ಸುತ್ತ ಬಿಗಿ ಬಂಧೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಮೋದಿ ಊಟ ಬಡಿಸುವ ಮೂಲಕ ಸೇವೆ ಮಾಡಿದ್ದಾರೆ.
ಕೇಸರಿ ಬಣ್ಣದ ಸಿಖ್ಖರ ಪೇಟ ಧರಿಸಿ ಮೋದಿ ಸಾಲಾಗಿ ಕುಳಿತಿದ್ದ ಭಕ್ತರಿಗೆ ಸ್ಟೀಲ್ ಬಕೆಟ್ ಹಿಡಿದುಕೊಂಡು ಬಡಿಸಿದ್ದಾರೆ. ಈ ವೇಳೆ ಪ್ರತಿಯೊಬ್ಬರೂ ಅವರಿಗೆ ವಂದಿಸಿದ್ದಾರೆ. ಅಷ್ಟೇ ಅಲ್ಲದೆ, ಊಟ ತಯಾರಿಸಲೂ ಮೋದಿ ಕೈ ಜೋಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೊಂದು ಸೇವೆ ಎಂಬಂತೆ ಅವರು ಮಾಡಿದ್ದಾರೆ. ನಿನ್ನೆ ಬಿಹಾರದಲ್ಲಿ ಮೋದಿ, ಸಿಎಂ ನಿತೀಶ್ ಕುಮಾರ್ ಜೊತೆ ರೋಡ್ ಶೋ ನಡೆಸಿದ್ದರು. ಈ ವೇಳೆ ಸಾಕಷ್ಟು ಜನ ಪಾಲ್ಗೊಂಡಿದ್ದರು. ನಿತೀಶ್ ಕುಮಾರ್ ಕೂಡಾ ಕೈಯಲ್ಲಿ ಕಮಲದ ಚಿಹ್ನೆ ಹಿಡಿದು ಜನರತ್ತ ಕೈ ಬೀಸಿದ್ದು ಸಾಕಷ್ಟು ಚರ್ಚೆಗೂ ಕಾರಣವಾಗಿದೆ.