ಮಾಂಸ ತಿನ್ನುವ ವಿಪಕ್ಷಗಳ ನಾಯಕರಿಗೆ ಟಾಂಗ್ ಕೊಟ್ಟ ಮೋದಿ

Krishnaveni K

ಶುಕ್ರವಾರ, 12 ಏಪ್ರಿಲ್ 2024 (16:21 IST)
ಉಧಾಮಪುರ್: ಚೈತ್ರ ನವರಾತ್ರಿ ಮಾಸದಲ್ಲಿ ಮಾಂಸ ತಿಂದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಾರೆ ಎಂದು ಪ್ರಧಾನಿ ಮೋದಿ ವಿಪಕ್ಷ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಇದೀಗ ನವರಾತ್ರಿ ಮಾಸ ನಡೆಯುತ್ತಿದೆ. ಹಿಂದೂಗಳ ಪಾಲಿಗೆ ಇದು ಪವಿತ್ರ ಮಾಸ. ಆದರೆ ಇತ್ತೀಚೆಗೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮೀನಿನ ಖಾದ್ಯವನ್ನು ಸೇವಿಸುವ ವಿಡಿಯೋವನ್ನು ಬೇಕೆಂದೇ ಹರಿಯಬಿಟ್ಟು ಹಿಂದೂಗಳ ಭಾವನೆ ಧಕ್ಕೆ ತಂದ ಆರೋಪಕ್ಕೊಳಗಾಗಿದ್ದರು.

ಇದೀಗ ಉಧಾಮ್ ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ವಿಪಕ್ಷ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ನೀವು ಈ ಮೂಲಕ ಯಾರನ್ನು ವ್ಯಂಗ್ಯ ಮಾಡುತ್ತಿದ್ದೀರಿ? ನವರಾತ್ರಿ ದಿನಗಳಲ್ಲಿ ಮಾಂಸಾಹಾರ ತಿನ್ನುವ ವಿಡಿಯೋ ಹಾಕಿ ಜನರ ಭಾವನೆಗೆ ನೋವು ಉಂಟುಮಾಡುತ್ತೀದ್ದೀರಾ? ಯಾರನ್ನು ಮೆಚ್ಚಿಸಲು ಈ ವಿಡಿಯೋ? ಈ ರೀತಿಯ ವಿಡಿಯೋ ಹಾಕಿ ಈ ದೇಶದ ಜನರ ನಂಬಿಕೆ ಮೇಲೆ ದಾಳಿ ಮಾಡುತ್ತಿದ್ದೀರಿ’ ಎಂದು ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ.

ತೇಜಸ್ವಿ ಯಾದವ್ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಇದ್ದರೂ ಮೋದಿ ತೇಜಸ್ವಿಯನ್ನುದ್ದೇಶಿಸಿಯೇ ಈ ಟೀಕೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚೆಗೆ ತೇಜಸ್ವಿ ಯಾದವ್ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡುವಾಗ ಮೀನಿನ ಖಾದ್ಯ ತಿನ್ನುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ