ಜಾಮೀನಿನ ಮೇಲೆ ಹೊರಗಿರುವವರೆಲ್ಲಾ ನಮಗೆ ಸರ್ಟಿಫಿಕೇಟ್ ಕೊಡ್ತಿದ್ದಾರೆ: ಹೀಗಂತ ಪ್ರಧಾನಿ ಮೋದಿ ಟಾಂಗ್ ಕೊಟ್ಟಿದ್ದು ಯಾರಿಗೆ?
ಮಂಗಳವಾರ, 13 ನವೆಂಬರ್ 2018 (09:05 IST)
ನವದೆಹಲಿ: ಜಾಮೀನಿನ ಮೇಲೆ ಹೊರಗಡೆ ಇರುವವರೆಲ್ಲಾ ನಮ್ಮ ಬಗ್ಗೆ ಮಾತಾಡಿ, ನಮಗೆ ಸರ್ಟಿಫಿಕೇಟ್ ಕೊಡ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ನಾಯಕಿ ಸೋನಿಯಾ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
ಛತ್ತೀಸ್ ಘಡದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ನೋಟು ನಿಷೇಧದ ಬಗ್ಗೆ ತಮ್ಮ ಮೇಲೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ವರಿಷ್ಠರಿಗೆ ತಿರುಗೇಟು ಕೊಟ್ಟಿದ್ದಾರೆ.
‘ಕಾಂಗ್ರೆಸ್ ನಲ್ಲಿ ರಾಜಕಾರಣ ಶುರುವಾಗುವುದು ಮುಗಿಯುವುದೂ ಒಂದು ಕುಟುಂಬದಿಂದ. ನೋಟು ನಿಷೇಧದ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುವ ತಾಯಿ ಮಗನ ಜೋಡಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಅಂತಹವರು ಮೋದಿಗೆ ಸರ್ಟಿಫಿಕೇಟ್ ಕೊಡುತ್ತಿದ್ದಾರೆ’ ಎಂದು ಟಾಂಗ್ ಕೊಟ್ಟಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅವ್ಯವಹಾರ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಾಮೀನು ಪಡೆದಿರುವ ಬಗ್ಗೆ ಮೋದಿ ಈ ರೀತಿ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.