ನವದೆಹಲಿ: ಅಯೋಧ್ಯೆಯಲ್ಲಿ ರಾಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣಕ್ಕೆ ಕೆಲವೇ ದಿನ ಬಾಕಿಯಿದೆ. ಲೋಕಾರ್ಪಣೆ ಕಾರ್ಯಕ್ರಮ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿದೆ.
ಈ ವಿಶೇಷ ಗಳಿಗೆಯಲ್ಲಿ ಪೂಜೆಯಲ್ಲಿ ಭಾಗಿಯಾಗುವುದರಿಂದ ಪ್ರಧಾನಿ ಮೋದಿ ಇಂದಿನಿಂದ 11 ದಿನಗಳ ಕಾಲ ಅನುಷ್ಠಾನ (ಮಡಿ)ಯಲ್ಲಿರುವುದಾಗಿ ಹೇಳಿದ್ದಾರೆ.
ಇಡೀ ದೇಶದ ಜನತೆ ಪರವಾಗಿ ರಾಮಮಂದಿರದ ಲೋಕಾರ್ಪಣೆ ಪೂಜೆಯಲ್ಲಿ ಭಾಗಿಯಾಗುವ ಯೋಗ ನನ್ನದು. ಹೀಗಾಗಿ ಇನ್ನು 11 ದಿನ ಮಡಿಯಲ್ಲಿರುವುದಾಗಿ ಮೋದಿ ಹೇಳಿದ್ದಾರೆ. ಇದಕ್ಕಾಗಿ ನಿಮ್ಮೆಲ್ಲರ ಆಶೀರ್ವಾದ ಕೋರುತ್ತೇನೆ ಎಂದು ಮೋದಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
ಹಿಂದೂ ಶಾಸ್ತ್ರ ಪದ್ಧತಿ ಪ್ರಕಾರ, ದೇವರ ಪ್ರಾಣ ಪ್ರತಿಷ್ಠೆ ಕಾರ್ಯದಲ್ಲಿ ಭಾಗಿಯಾಗುವಾಗ ಕೆಲವೊಂದು ವಿಶೇಷ ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ. ಅದರ ಅಂಗವಾಗಿಯೇ ಇಂದಿನಿಂದ ಮೋದಿ 11 ದಿನಗಳ ಕಾಲ ಅನುಷ್ಠಾನದಲ್ಲಿರುವುದಾಗಿ ಹೇಳಿದ್ದಾರೆ.