ಆಬ್ಸೆಂಟ್ ಆಗುವ ಸಂಸದರಿಗೆ ಮೋದಿ ಮೇಸ್ಟ್ರು ಶಿಕ್ಷೆ ಕೊಡ್ತಾರೆ!

ಬುಧವಾರ, 22 ಮಾರ್ಚ್ 2017 (09:38 IST)
ನವದೆಹಲಿ: ಪ್ರಧಾನಿಯಾದ ಮೇಲೆ ಸಂಸದರಿಗೂ ಶಿಸ್ತು ರೂಪಿಸಿರುವ ನರೇಂದ್ರ ಮೋದಿ, ಸಂಸತ್ತಿಗೆ ಗೈರು ಹಾಜರಾಗುವ ಸಂಸದರ ಮೇಲೆ ನಿಗಾ ಇಡಲು ಕ್ರಮ ಕೈಗೊಂಡಿದ್ದಾರಂತೆ!

 

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ತಮ್ಮ ಪಕ್ಷದ ಸಂಸದರಿಗೆ ಹೀಗೊಂದು ಎಚ್ಚರಿಕೆ ನೀಡಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಸಭೆಯಲ್ಲಿ ದಯವಿಟ್ಟು ಸಂಸತ್ತಿಗೆ ಎಲ್ಲರೂ ಹಾಜರಾಗಿ ಎಂದು ಮನವಿ ಮಾಡಿದ್ದು, ಪ್ರಧಾನಿ ಮೋದಿಗೆ ಇಷ್ಟವಾಗಲಿಲ್ಲ.

 
ಯಾರಿಗೂ ಮನವಿ ಮಾಡಬೇಕಿಲ್ಲ. ಎಲ್ಲರೂ ಸಂಸದರಾಗಿ ಆಯ್ಕೆಯಾಗಿರುವುದೇ ಸಂಸತ್ತಿನ ಕಲಾಪದಲ್ಲಿ ಭಾಗವಹಿಸುವುದಕ್ಕೆ. ಅಧಿವೇಶನ ಇರುವಾಗ ನಾನು ಏನಾದರೂ ಕೆಲಸಕ್ಕೆ ಯಾವುದೇ ಸಂಸದನ ಹೆಸರು ಬರೆದ ಚೀಟು ಕಳುಹಿಸುತ್ತೇನೆ. ತಕ್ಷಣ ಅವರು ನನ್ನ ಕ್ಯಾಬಿನ್ ಗೆ ಬರಬೇಕು. ಪ್ರತಿಯೊಬ್ಬ ಸಂಸದರ ಮೇಲೆ ನಿಗಾ ಇಡುತ್ತೇನೆ ಎಂದಿದ್ದಾರೆ ಪ್ರಧಾನಿ ಮೋದಿ.

 
ಏನೇ ಇದ್ದರೂ ಸಂಸತ್ತು ಅಧಿವೇಶನ ನಡೆಯುವಾಗ ಸದನದಲ್ಲಿರಲೇಬೇಕು ಎಂದು ಮೋದಿ ಕಟ್ಟಪ್ಪಟ್ಟಣೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದರು ಹೇಳಿದ್ದಾರೆ. ಹೀಗಾಗಿ ಆಬ್ಸೆಂಟ್ ಆಗುವ ಸಂಸದರು ಇನ್ನು ಮುಂದೆ ಹುಷಾರಾಗಿರಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ