ದೂರದ ಬಹರೈನ್ ನಲ್ಲೇ ಅರುಣ್ ಜೇಟ್ಲಿ ನೆನೆದು ದುಃಖಿಸಿದ ಪ್ರಧಾನಿ ಮೋದಿ

ಭಾನುವಾರ, 25 ಆಗಸ್ಟ್ 2019 (12:32 IST)
ನವದೆಹಲಿ: ಒಂದೆಡೆ ಕರ್ತವ್ಯ, ಇನ್ನೊಂದೆಡೆ ಗೆಳೆಯನ ಸಾವು.. ಇದೆರಡರ ಮಧ್ಯೆ ಪ್ರಧಾನಿ ಮೋದಿ ಕೊಂಚ ಭಾವುಕರಾಗಿದ್ದಾರೆ. ಬಹರೈನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗೆಳೆಯ ಅರುಣ್ ಜೇಟ್ಲಿ ನೆನೆದು ದುಃಖ ಪಟ್ಟಿದ್ದಾರೆ.


ಬಹರೈನ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ನಾನು ಇಲ್ಲಿ ಬಹರೈನ್ ಗೆ ಬಂದಿದ್ದೇನೆಂದರೆ ಯೋಚಿಸಲೂ ಆಗುತ್ತಿಲ್ಲ. ಇನ್ನೊಂದೆಡೆ ನನ್ನ ಗೆಳೆಯ ಅರುಣ್ ಇನ್ನಿಲ್ಲವಾಗಿದ್ದಾನೆ. ಕೆಲವು ದಿನಗಳ ಹಿಂದೆ ನಮ್ಮ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಕಳೆದುಕೊಂಡಿದ್ದೆವು. ಇಂದು ನನ್ನ ಗೆಳೆಯ  ಅರುಣ್ ಹೋಗಿದ್ದಾನೆ. ಅವನು ನನಗೆ ಪ್ರತೀ ಹಂತದಲ್ಲೂ ಬೆಂಬಲವಾಗಿ ನಿಂತ ಗೆಳೆಯ’ ಎಂದು ಪ್ರಧಾನಿ ಮೋದಿ ಭಾವುಕರಾಗಿ ಹೇಳಿದ್ದಾರೆ.

ಅರುಣ‍್ ಜೇಟ್ಲಿ ಅಂತಿಮ ದರ್ಶನ ಪಡೆದ ಬಳಿಕ ಪ್ರಧಾನಿ ಮೋದಿ ಬಹರೈನ್ ಗೆ ತೆರಳಿದ್ದರು. ಸ್ವತಃ ಅರುಣ್ ಜೇಟ್ಲಿ ಕುಟುಂಬವೇ ಪ್ರವಾಸ ರದ್ದುಗೊಳಿಸದಿರಲು ಪ್ರಧಾನಿ ಮೋದಿಗೆ ಮನವಿ ಮಾಡಿತ್ತು. ಹೀಗಾಗಿ ಇಂದು ನಡೆಯಲಿರುವ ಅರುಣ್ ಜೇಟ್ಲಿ ಅಂತ್ಯ ಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ