ಮೋದಿ ಟ್ವಿಟರ್ ಗೆ ಕನ್ನ ಹಾಕಿದ ಹ್ಯಾಕರ್ ಖದೀಮರು

ಗುರುವಾರ, 3 ಸೆಪ್ಟಂಬರ್ 2020 (10:03 IST)
ನವದೆಹಲಿ: ಪ್ರಧಾನಿ ಮೋದಿಯವರ ವೈಯಕ್ತಿಕ ವೆಬ್ ಸೈಟ್ ನ ಟ್ವಿಟರ್ ಖಾತೆಯನ್ನು ಖದೀಮರು ಹ್ಯಾಕ್ ಮಾಡಿದ್ದಾರೆ. ಈ ಟ್ವಿಟರ್ ಖಾತೆಯಿಂದ ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡಲಾಗಿದೆ.


ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ತಾಂತ್ರಿಕ ತಂಡ ದೋಷ ಸರಿಪಡಿಸಲು ಮುಂದಾಗಿದೆ. ಸರಣಿ ಟ್ವೀಟ್ ಮಾಡಿರುವ ಹ್ಯಾಕರ್ ಗಳು ಪ್ರಧಾನಿ ಪರಿಹಾರ ನಿಧಿಗೆ ಹಣ ದೇಣಿಗೆ ನೀಡುವಂತೆ ಟ್ವೀಟ್ ಮಾಡಲಾಗಿತ್ತು. ಇದೀಗ ಅಂತಹ ಟ್ವೀಟ್ ಗಳನ್ನು ಡಿಲೀಟ್ ಮಾಡಲಾಗಿದೆ. ಈ ಖಾತೆಯಲ್ಲಿ ಪ್ರಧಾನಿ ಮೋದಿಗೆ 2.5 ಮಿಲಿಯನ್ ಹಿಂಬಾಲಕರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ