ವಿದೇಶ ಪ್ರವಾಸದಲ್ಲಿ ಹೋಟೆಲ್ ನಲ್ಲಿ ಉಳಿದುಕೊಳ್ಳಲ್ವಂತೆ ಪ್ರಧಾನಿ ಮೋದಿ! ಕಾರಣವೇನು ಗೊತ್ತಾ?

ಗುರುವಾರ, 28 ನವೆಂಬರ್ 2019 (09:44 IST)
ನವದೆಹಲಿ: ಪ್ರಧಾನಿ ಮೋದಿ ಸುದೀರ್ಘ ವಿದೇಶ ಯಾತ್ರೆ ಸಂದರ್ಭದಲ್ಲಿ ಆದಷ್ಟು ಹೋಟೆಲ್ ನಲ್ಲಿ ಉಳಿದುಕೊಳ್ಳುವುದನ್ನು ಅವಾಯ್ಡ್ ಮಾಡುತ್ತಾರಂತೆ. ಇದಕ್ಕೆ ಕಾರಣವೇನು ಗೊತ್ತಾ?


ಈ ಬಗ್ಗೆ ವಿವರಣೆ ನೀಡಿರುವ ಗೃಹ ಸಚಿವ  ಅಮಿತ್ ಶಾ ಪ್ರಧಾನಿ ಮೋದಿ ಹೋಟೆಲ್ ನಲ್ಲಿ ಉಳಿದುಕೊಳ್ಳದೇ ಇರಲು ಕಾರಣ ತಿಳಿಸಿದ್ದಾರೆ. ವಿದೇಶ ಯಾತ್ರೆಗೆ ಬಳಸುವ ವಿಶೇಷ ವಿಮಾನಕ್ಕೆ ಇಂಧನ ತುಂಬಲು ಕೆಲ ಸಮಯ ಕಾಯಬೇಕಾದಾಗ ಅಥವಾ ರಾತ್ರಿ ವೇಳೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ತಂಗಬೇಕಾದ ಪ್ರಧಾನಿ ಮೋದಿ ಹೋಟೆಲ್ ಬದಲು ಆಯಾ ವಿಮಾನ ನಿಲ್ದಾಣದಲ್ಲೇ ವಿಶ್ರಾಂತಿ ಪಡೆಯುತ್ತಾರಂತೆ.

ಈ ಮೂಲಕ ಪ್ರಧಾನಿ ಮೋದಿ ವೆಚ್ಚ ಕಡಿತ ಮಾಡಲು ಪ್ರಯತ್ನಿಸುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ವಿದೇಶಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆಲವೇ ಗಂಟೆ ಹೋಟೆಲ್ ನಲ್ಲಿ ಉಳಿದುಕೊಳ್ಳುವ ಬದಲು ಈ ರೀತಿ ಮಾಡುತ್ತಾರಂತೆ. ಈ ಮೂಲಕ ವೆಚ್ಚ ಕಡಿತಕ್ಕೆ ಅವರೇ ಮಾದರಿಯಾಗಿ ಅದನ್ನು ಶಿಸ್ತಿನಿಂದ ಪಾಲಿಸುತ್ತಾರೆ ಎಂದು ಗೃಹಸಚಿವರು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ