ನವದೆಹಲಿ: 2024 ಇಂದಿಗೆ ಮುಗಿಯಲಿದ್ದು ನಾಳೆಯಿಂದ ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷಕ್ಕೆ ಪ್ರಧಾನಿ ಮೋದಿ ಬಡವರಿಗೆ ಬಂಪರ್ ಗಿಫ್ಟ್ ನೀಡಲಿದ್ದಾರೆ. ಏನಿದು ಇಲ್ಲಿದೆ ವಿವರ.
ಹೊಸ ವರ್ಷಕ್ಕೆ ಉಡುಗೊರೆಯಾಗಿ ಪ್ರಧಾನಿ ಮೋದಿ ಬಡವರಿಗೆ ಎರಡು ಕೋಟಿ ಮನೆಗಳನ್ನು ನೀಡಲು ಮನೆ ಮನೆ ಸಮೀಕ್ಷೆ ಪ್ರಾರಂಭಿಸಲು ನಿರ್ಧಾರ ಮಾಡಿದೆ. ಮುಂದಿನ ಮೂರು ತಿಂಗಳೊಳಗಾಗಿ ಸಮೀಕ್ಷೆ ಪೂರ್ತಿ ಮಾಡಲು ಸೂಚನೆ ನೀಡಲಾಗಿದೆ.
ಈ ಬಾರಿ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಇದನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಅದರಂತೆ ಅರ್ಹ ಕುಟುಂಬಗಳನ್ನು ಗುರುತಿಸಿ ಪಿಎಂ ಆವಾಸ್ 2024 ಅಪ್ಲಿಕೇಷನ್ ಬಳಸಿ ಸಮೀಕ್ಷೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಸ್ವಂತ ಮನೆಯಿಲ್ಲದ ಬಡವರಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಮುಖೇನ ಅರ್ಹರನ್ನು ಗುರುತಿಸಿ ಸಮೀಕ್ಷೆ ನಡೆಸಲಾಗುತ್ತದೆ. ಮಾರ್ಚ್ ಒಳಗಾಗಿ ಸಮೀಕ್ಷೆ ಪೂರ್ತಿಗೊಳಿಸಲು ಸೂಚಿಸಲಾಗಿದೆ. ಪಿಎಂ ಆವಾಸ್ ಯೋಜನೆಯಡಿ ಈಗಾಗಲೇ 1 ಕೋಟಿ ಮನೆಗಳ ಸಮೀಕ್ಷೆ ಮಾಡಲಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಮೂರು ಕೋಟಿ ಮನೆಗಳ ಭರವಸೆ ನೀಡಿತ್ತು.
ಸಮೀಕ್ಷೆ ನಡೆಸುವುದು ಹೇಗೆ?
ಆವಾಸ್ ಪ್ಲಸ್ 2024 ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು ಸ್ವಯಂ ಸಮೀಕ್ಷೆಯನ್ನು ಮಾಡಲು ಜನರಿಗೆ ಅವಕಾಶ ನೀಡಲಾಗಿದೆ. ಅವಾಸ್ ಪ್ಲಸ್ 2024 ಅಪ್ಲಿಕೇಷನ್ ಮುಖಾಂತರ ಎಲ್ಲಾ ಅರ್ಹರ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಮತ್ತು ಸ್ವಯಂ ದೃಢೀಕರಣದ ಮೂಲಕ ಜನರಿಗೆ ಸ್ವಯಂ ಸಮೀಕ್ಷೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.