2 ವರ್ಷ ಪೂರ್ಣಗೊಳಿಸಿದ ಪ್ರಧಾನಿ ಮೋದಿಯಿಂದ ಹಾಡು ಬಿಡುಗಡೆ

ಶುಕ್ರವಾರ, 20 ಮೇ 2016 (19:54 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ವರ್ಷಗಳ ಅಧಿಕಾರವಧಿಯನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಸರಕಾರದ ಸಾಧನೆಯ ಬಗ್ಗೆ ಹಾಡೊಂದನ್ನು ಬಿಡುಗಡೆಗೊಳಿಸಿದ್ದಾರೆ. 
 
ಮೇರಾ ದೇಶ್ ಬದಲ್ ರಹಾ ಹೈ.... ಆಗೇ ಬಢ ರಹಾ ಹೈ ಎನ್ನುವ ಶಿರ್ಷಿಕೆಯಿರುವ ಹಾಡನ್ನು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 
 
ಎನ್‌ಡಿಎ ಸರಕಾರ ಎಲ್‌ಪಿಜಿ ಸಂಪರ್ಕ, ಬಾಲಕಿಯರಿಗೆ ಶಿಕ್ಷಣ, ರೈತರಿಗೆ ವಿಮೆ, ಗ್ರಾಮೀಣ ಭಾಗಗಳಿಗೆ ರಸ್ತೆ ಸಂಪರ್ಕ ಸೇರಿದಂತೆ ಬಡವರಿಗಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುತ್ತದೆ. 

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ