ಕಚ್ಚಿದ ಗುರುತಿನಿಂದ ಆರೋಪಿಯ ಪತ್ತೆ ಮಾಡಿದ ಪೊಲೀಸರು!

ಬುಧವಾರ, 17 ಆಗಸ್ಟ್ 2022 (08:30 IST)
ಥಾಣೆ: ಪೊಲೀಸರು ಅಪರಾಧಿಗಳನ್ನು ಪತ್ತೆ ಮಾಡಲು ಯಾವೆಲ್ಲಾ ಮಾರ್ಗ ಬಳಸಬೇಕಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ.

32 ವರ್ಷದ ಯುವತಿಯನ್ನು ವ್ಯಕ್ತಿಯೊಬ್ಬ ಲೈಂಗಿಕವಾಗಿ ಪೀಡಿಸಲು ನೋಡಿದ್ದ. ಥಾಣೆಯಲ್ಲಿ ಈ ಘಟನೆ ನಡೆದಿತ್ತು. ಸ್ಕೈವಾಕ್ ನಲ್ಲಿ ಕೂತಿದ್ದ ಯುವತಿಗೆ ಹಿಂದಿನಿಂದ ಬಂದ ವ್ಯಕ್ತಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದ. ಆತನನ್ನು ತಡೆಯಲು ಯುವತಿ ಆರೋಪಿಗೆ ಬಲವಾಗಿ ಕಚ್ಚಿದ್ದಳು.

ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಯ ಮೇಲಿನ ಕಚ್ಚಿದ ಗುರುತಿನ ಆಧಾರದ ಮೇರೆಗೆ ಅರೆಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ