ಶ್ರೀಕೃಷ್ಣ ಜನ್ಮಾಷ್ಠಮಿ ನೆಪದಲ್ಲಿ ವ್ಯಾಪಾರಿಗಳಿಂದ ಹಣ ಕಿತ್ತುಕೊಂಡ ಪೊಲೀಸರು!
ರೈಲ್ವೇ ನಿಲ್ದಾಣದಲ್ಲಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಗಳಿಗೆ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ದೇಣಿಗೆ ಎಂದು ರೈಲ್ವೇ ಪೊಲೀಸರು 2,100 ರೂ. ವಸೂಲಿ ಮಾಡಿದ್ದಾರೆ. ಇದಕ್ಕೆ ವಿಶೇಷ ರಸೀತಿಯನ್ನೂ ಮಾಡಿಸಿಕೊಂಡಿದ್ದು, ವ್ಯಾಪಾರಿಗಳಿಂದ ಸುಲಿಗೆ ಮಾಡಿದ್ದಾರೆ.
ಈ ಬಗ್ಗೆ ವ್ಯಾಪಾರಿಗಳು ಆರೋಪ ಮಾಡಿದ್ದು, ದೇವರ ಹೆಸರಲ್ಲಿ ಪೊಲೀಸರು ಸಾವಿರಾರು ರೂ. ಕಿತ್ತುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.