ರೀಲ್ಸ್ ಮಾಡಲು ಮಹಿಳೆಯ ಕೊಲೆ ಮಾಡಿ ಫೋನ್ ಕಿತ್ತುಕೊಂಡ ಬಾಲಕ!
ಜೂನ್ ನಲ್ಲಿ ಘಟನೆ ನಡೆದಿತ್ತು. 15 ವರ್ಷದ ಬಾಲಕ ಮಹಿಳೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ಫೋನ್ ಕಿತ್ತುಕೊಂಡು ಓಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಕೊನೆಗೂ ಈಗ ಆರೋಪಿಯನ್ನು ಸೆರೆಹಿಡಿದಿದ್ದಾರೆ. ವಿಚಾರಣೆ ವೇಳೆ ಆತ ರೀಲ್ಸ್ ಮಾಡಲು ಫೋನ್ ಬೇಕಿತ್ತು. ಹೀಗಾಗಿ ಕೊಲೆ ಮಾಡಿ ಫೋನ್ ಕದ್ದಿರುವುದಾಗಿ ಹೇಳಿಕೊಂಡಿದ್ದಾನೆ.