ಕೇಂದ್ರ ಚುನಾವಣೆ ಆಯೋಗದೊಂದಿಗೆ ಎರಡೆಲೆ ಚಿಹ್ನೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ (ಅಮ್ಮ) ಬಣದ ನಾಯಕ ಟಿಟಿವಿ ದಿನಕರನ್ ಭಾಗಿಯಾಗಿರುವ ಪ್ರಕರಣದಲ್ಲಿ, ಮಧ್ಯವರ್ತಿಯಾಗಿರುವ ಆರೋಪಿಯ ವಿರುದ್ಧ ದೆಹಲಿ ಪೊಲೀಸರು ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸಿದ್ದಾರೆ.
ವಂಚನೆ, ಮೋಸದ ಉದ್ದೇಶ, ಖೋಟಾ ಭದ್ರತಾ ಪತ್ರಗಳು, ವಂಚನೆಗಾಗಿ ನಕಲಿ ದಾಖಲೆಗಳನ್ನು ಬಳಸಿರುವ ಉದ್ದೇಶ ಕಾನೂನಿನಡಿ ಐಪಿಸಿ ಅಡಿಯಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.