ಲಾಕ್ ಡೌನ್ ಪಾಸ್ ತೋರಿಸಲು ಹೇಳಿದಕ್ಕೆ ಪೊಲೀಸರ ಕೈ ಕತ್ತರಿಸಿದ ಗುಂಪು

ಸೋಮವಾರ, 13 ಏಪ್ರಿಲ್ 2020 (07:04 IST)
ಪಟಿಯಾಲ : ಲಾಕ್ ಡೌನ್ ಪಾಸ್ ತೋರಿಸಲು ಹೇಳಿದ ಪೊಲೀಸರ ಮೇಲೆ ನಿಹಾಂಗ್ ಸಿಖ್ಖರ ಗುಂಪೊಂದು ಹಲ್ಲೆ ನಡೆಸಿ ಅಧಿಕಾರಿಯೊಬ್ಬರ ಕೈ ಕತ್ತರಿಸಿದ ಘಟನೆ ಪಂಜಾಬ್ ಪಟಿಯಾಲ ಜಿಲ್ಲೆಯಲ್ಲಿ ನಡೆದಿದೆ.


ಪಟಿಯಾಲ ತರಕಾರಿ ಮಾರುಕಟ್ಟೆಯ ಬಳಿ ಆರು ಜನರಿರುವ ವಾಹನವನ್ನು ಪೊಲೀಸರು ತಡೆದು ಲಾಕ್ ಡೌನ್ ಪಾಸ್ ತೋರಿಸುವಂತೆ ಕೇಳಿದ್ದಾರೆ. ಅದಕ್ಕೆ ಕೋಪಗೊಂಡ ಅವರು ಕತ್ತಿ, ಮಾರಾಕಾಸ್ತ್ರಗಳನ್ನು ತೆಗೆದು  ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವೇಳೆ ನಿಹಾಂಗ್ ನ ಎಎಸ್ ಐ ಹರ್ಜಿತ್ ಸಿಂಗ್ ಎಂಬುವವರ ಕೈಯನ್ನು ಕತ್ತರಿಸಿದ್ದಾನೆ.


ಹರ್ಜಿತ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಮತ್ತಿಬ್ಬರು ಪೊಲೀಸರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ