ಶೇನ್ ವಾರ್ನ್ ಟವೆಲ್ನಲ್ಲಿ ರಕ್ತದ ಕಣ ಇತ್ತು ಎಂದ ಪೊಲೀಸ್!
ವಾರ್ನ್ ಮಾರ್ಚ್ 3 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಥಾಯ್ಲೆಂಡ್ನ ವಿಲ್ಲಾದಲ್ಲಿದ್ದ ವಾರ್ನ್ಗೆ ಏಕಾಏಕಿ ಹೃದಯಘಾತವಾಗಿದೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದರೂ ಕೂಡ ಬದುಕುಳಿದಿರಲಿಲ್ಲ.
ಈ ಬಗ್ಗೆ ಸ್ಥಳೀಯ ಮಾಧ್ಯವೊಂದರ ವರದಿ ಪ್ರಕಾರ, ವಾರ್ನ್ ಇದ್ದ ಕೋಣೆಯಲ್ಲಿ ರಕ್ತದ ಕಣಗಳು ಪತ್ತೆಯಾಗಿದ್ದು, ಸಿಪಿಆರ್ ಪರೀಕ್ಷೆ ನಡೆಸುವ ಸಂದರ್ಭ ವಾರ್ನ್ ಕೆಮ್ಮಿದಾಗ ರಕ್ತ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.