ಸೇನೆ ಸೇರಲು 10 ಕಿ.ಮೀ. ಓಡುತ್ತಾ ಮನೆ ಸೇರುವ ಬಡ ಯುವಕನ ವಿಡಿಯೋ ವೈರಲ್

ಸೋಮವಾರ, 21 ಮಾರ್ಚ್ 2022 (16:53 IST)
ನವದೆಹಲಿ: ಸೇನೆ ಸೇರಬೇಕೆಂಬ ಹಂಬಲದಿಂದ ದೈಹಿಕ ಕ್ಷಮತೆಗಾಗಿ ಪ್ರತಿನಿತ್ಯ ಕೆಲಸ ಮುಗಿಸಿ 10 ಕಿ.ಮೀ. ಓಡುತ್ತಾ ಮನೆ ಸೇರುವ ಪ್ರದೀಪ್ ಮೆಹ್ರಾ ಎಂಬ ಯುವಕನ ವಿಡಿಯೋ ವೈರಲ್ ಆಗಿತ್ತು. ಈಗ ಆ ಯುವಕನಿಗೆ ನೆರವಿನ ಮಹಾಪೂರ ಹರಿದುಬರುತ್ತಿದೆ.

ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ಈ ಯುವಕ ರಸ್ತೆಯಲ್ಲಿ ಓಡುತ್ತಿರುವುದನ್ನು ನೋಡಿ ವಿಡಿಯೋ ಮಾಡಿದ್ದಲ್ಲದೆ, ಆ ಯುವಕನ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆತ ನೋಯ್ಡಾದಲ್ಲಿ ಮೆಕ್ ಡೊನಾಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಸಮಯ ಸಿಗುವುದಿಲ್ಲ ಎಂಬ ಕಾರಣಕ್ಕೆ ರಾತ್ರಿ 10 ಕಿ.ಮೀ. ಓಡಿ ಮನೆ ತಲುಪುವುದಾಗಿ ಹೇಳಿದ್ದಾನೆ. ಸೇನೆ ಸೇರಲೆಂದು ದೇಹ ಫಿಟ್ ಆಗಿರಲು ಹೀಗೆ ಓಡಿ ಮನೆ ಸೇರುವುದಾಗಿ ಹೇಳಿದ್ದಾನೆ.

ಅಲ್ಲದೆ ಆತನ ಮನೆಯಲ್ಲಿ ತಾಯಿ ಹಾಸಿಗೆ ಹಿಡಿದಿದ್ದು, ಸಹೋದರ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವುದಾಗಿ ಹೇಳುತ್ತಾನೆ. ವಿನೋದ್ ಕಾಪ್ರಿ ಕಾರಿನಲ್ಲಿ ಡ್ರಾಪ್ ಕೊಡಲು ಹೊರಟಾಗ ನಿರಾಕರಿಸಿದ್ದಾನೆ. ಅಲ್ಲದೆ, ಊಟ ಕೊಡಲು ಹೊರಟಾಗಲೂ ನಿರಾಕರಿಸಿದ್ದಾನೆ. ಆತನ ಸ್ಪೂರ್ತಿದಾಯಕ ಜೀವನ ಕತೆ ಈಗ ಎಲ್ಲೆಡೆ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ