ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ

ಶುಕ್ರವಾರ, 25 ಫೆಬ್ರವರಿ 2022 (06:43 IST)
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೇನಾ ಶಿಬಿರದ ಇಂಟಿಗ್ರೇಟೆಡ್ ಹೆಡ್ ಕ್ವಾಟರ್ಸ್ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
 
ಈ ನೇಮಕಾತಿಗಾಗಿ ಅರ್ಜಿಯನ್ನು ಆಫ್ಲೈನ್ ಮೋಡ್ನಲ್ಲಿ ಸಲ್ಲಿಸಬೇಕಾಗುತ್ತದೆ. ಅಂದರೆ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ವಿವರಗಳು

MTS (ಸಫಾಯಿವಾಲ) – ಒಟ್ಟು ಹುದ್ದೆಗಳು- 7
ಸಾಮಾನ್ಯ ಅಭ್ಯರ್ಥಿಗಳು – 5 ಹುದ್ದೆಗಳು
OBC – 2 ಹುದ್ದೆಗಳು (ಒಂದು ಹುದ್ದೆ ಮಾಜಿ ಸೈನಿಕರಿಗೆ ಕಾಯ್ದಿರಿಸಲಾಗಿದೆ)

ಎಂಟಿಎಸ್ ಹುದ್ದೆಗಳ ವೇತನ

MTS (Safaiwala) ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ 18000 ರೂ. ವೇತನ ನೀಡಲಾಗುತ್ತದೆ.

ವಯೋಮಿತಿ

ಈ ಹುದ್ದೆಗಳಿಗೆ 18 ರಿಂದ 25 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ಮಂಡಳಿಯಿಂದ 10ನೇ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮನೆಗೆಲಸದ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಪ್ರವೀಣರಾಗಿರಬೇಕು. ಅಲ್ಲದೆ, ಯಾವುದೇ ಸಿವಿಲ್ / ಸರ್ಕಾರಿ ಕಚೇರಿಯಲ್ಲಿ ಆರು ತಿಂಗಳ ಕೆಲಸದ ಅನುಭವ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ

MTS ಹುದ್ದೆಗೆ ಅರ್ಹ ಅಭ್ಯರ್ಥಿಗಳ ಆಯ್ಕೆಯನ್ನು ಸ್ಕ್ರೀನಿಂಗ್ ಮತ್ತು ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಸ್ಕ್ರೀನಿಂಗ್ 10 ನೇ ತರಗತಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಆಧರಿಸಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ

ಈ ಹುದ್ದೆಗಳಿಗೆ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಗೆಜೆಟೆಡ್ ಅಧಿಕಾರಿಯಿಂದ ಅಗತ್ಯ ದಾಖಲೆಗಳ ದೃಢೀಕರಿಸಿದ ಫೋಟೊಕಾಪಿಗಳೊಂದಿಗೆ ಲಕೋಟೆಯಲ್ಲಿ ಅರ್ಜಿ ನಮೂನೆಯನ್ನು ಸಲ್ಲಿಸಿ.

ಅರ್ಜಿ ಕಳುಹಿಸಬೇಕಾದ ವಿಳಾಸ

HQ Mod (Army) Camp,
Rao Ram Marg,
NEW Delhi-110010

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ