ದೇಶದ ಕ್ಷಮೆ ಕೇಳಲು ತಯಾರಿದ್ದೀರಾ? ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸವಾಲು
ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನವಾಗಿರುವುದಕ್ಕೆ ಅವರು ನನಗಿಂತ ದೊಡ್ಡ ನಟ ಎಂದು ಟೀಕಿಸಿದ್ದರು. ಅದಾದ ಬಳಿಕ ತಾಜ್ ಮಹಲ್ ವಿಚಾರದಲ್ಲೂ ಕೇಂದ್ರವನ್ನು ಕೆಣಕಿದ್ದರು. ತದನಂತರ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಕುರಿತು ಹೇಳಿಕೆ ನೀಡಿದಾಗಲೂ ಸಮರ್ಥಿಸಿಕೊಂಡಿದ್ದರು. ಇದೀಗ ಮತ್ತೆ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.