ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಸುಳ್ಳು ಹೇಳ್ತಾರಂತೆ!
2011 ರಲ್ಲಿ ಅಂದು ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ, ಅಂದು ಪ್ರಧಾನಿಯಾಗಿದ್ದ ತಮ್ಮ ಬಳಿ ನರ್ಮದಾ ನದಿ ವಿವಾದದ ವಿಚಾರವಾಗಿ ಚರ್ಚಿಸಿರಲೇ ಇಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಆದರೆ ಈ ಹೇಳಿಕೆ ಬರೀ ಸುಳ್ಳು. 2011 ಮತ್ತು 2013 ರಲ್ಲಿ ಮೋದಿ, ಮನಮೋಹನ್ ಸಿಂಗ್ ರನ್ನು ಭೇಟಿಯಾಗಿದ್ದರು. ಡಾ. ಸಿಂಗ್ ಬರೀ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ವಿಜಯ್ ರೂಪಾನಿ ಆರೋಪಿಸಿದ್ದಾರೆ.