ಸಂಸದರೇ ಪ್ರಾಮಾಣಿಕವಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಗುರುವಾರ, 8 ಡಿಸೆಂಬರ್ 2016 (16:14 IST)
ನೋಟು ನಿಷೇಧ ಕುರಿತಂತೆ ವಿಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಬೇಡ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೋರಿದ್ದಾರೆ.
 
ಬಹುಮತ ಹೊಂದಿರುವ ಸರಕಾರದ ಮೇಲೆ ವಿಪಕ್ಷಗಳು ಒತ್ತಡ ಹೇರುವುದು ಸರಿಯಲ್ಲ. ಸಣ್ಣ ಸಣ್ಣ ಪಕ್ಷಗಳು ಸದನದ ಬಾವಿಗೆ ಬಂದು ಹೋರಾಟ ನಡೆಸುವುದು ಹವ್ಯಾಸವಾಗಿದೆ. ಇದರಿಂದ ಕಲಾಪಕ್ಕೆ ಅಡ್ಡಿಯಾಗಿ ಸದನವನ್ನು ಮುಂದೂಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸಂಸತ್ ಕಲಾಪಕ್ಕೆ ಪದೇ ಪದೇ ಅಡ್ಡಿ ತರುವುದು ಸ್ವೀಕಾರಾರ್ಹವಲ್ಲ ಎಂದು ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
 
ಮತದಾರರು ಸಂಸತ್ತಿನಲ್ಲಿ ಚರ್ಚೆ ನಡೆಸಲು ನಿಮ್ಮನ್ನು ಜನಪ್ರತಿನಿಧಿಗಳಾಗಿ ಕಳುಹಿಸಿದ್ದಾರೆಯೇ ಹೊರತು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ಅಲ್ಲ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಚುನಾವಣೆ ಸುಧಾರಣೆ ಮಸೂದೆ ಮಂಡಿಸುವುದು ಅತ್ಯಗತ್ಯವಾಗಿದೆ ಎಂದಿದ್ದಾರೆ.
 
ಏತನ್ಮಧ್ಯೆ, ಸಂಸತ್ ಕಲಾಪ ಹಾಳಾಗಲು ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ. ಮೊದಲ ಬಾರಿಗೆ ರಾಷ್ಟ್ರಪತಿ ಮುಖರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರಕಾರ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವುದು ಅಗತ್ಯವಾಗಿದೆಯೇ ಹೊರತು ಕಲಾಪದಿಂದ ಓಡಿಹೋಗುವುದಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ನೋಟು ನಿಷೇಧ ಕುರಿತಂತೆ ಕೇಂದ್ರ ಸರಕಾರ ವಿಪಕ್ಷಗಳೊಂದಿಗೆ ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸಲು ಸಿದ್ದವಿದೆ ಎಂದು ಬಿಜೆಪಿ ವಕ್ತಾರ ಸುದೇಶ್ ವರ್ಮಾ ತಿಳಿಸಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಖುದ್ದಾಗಿ ನೋಟು ನಿಷೇಧ ಕುರಿತಂತೆ ಮಾತನಾಡಬೇಕು ಎಂದು ಒತ್ತಾಯಿಸಿ ಚಳಿಗಾಲದ ಅಧಿವೇಶನ ಆರಂಭದಿಂದಲೂ ವಿಪಕ್ಷಗಳು ಒತ್ತಾಯಿಸುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ