ರಾಷ್ಟ್ರಪತಿ, ಕೇಂದ್ರ ಸಚಿವರು ಹಿಂದಿ ಭಾಷೆಯಲ್ಲಿಯೇ ಭಾಷಣ ಮಾಡಬೇಕಂತೆ

ಮಂಗಳವಾರ, 18 ಏಪ್ರಿಲ್ 2017 (19:51 IST)
ಸಂಸದೀಯ ಸಮಿತಿಯ ಶಿಫಾರಸ್ಸುಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ವೀಕರಿಸಿ ಜಾರಿಗೊಳಿಸಿದಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ಕೇಂದ್ರ ಸಚಿವರು ಹಿಂದಿ ಭಾಷೆಯಲ್ಲಿ ಭಾಷಣ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. 
 
ಕಳೆದ 2011ರಲ್ಲಿ ಅದಿಕೃತ ಭಾಷೆಯ ಸಂಸದೀಯ ಸಮಿತಿ ಸಲ್ಲಿಸಿದ ಒಂಬತ್ತನೇ ವರದಿಯಲ್ಲಿರುವ ಬಹುತೇಕ ಪ್ರಮುಖಾಂಶಗಳಿಗೆ ಮುಖರ್ಜಿ ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
 
ಸಂಸದೀಯ ಸಮಿತಿಯ ಶಿಫಾರಸ್ಸಿನ ಪ್ರಕಾರ ರಾಷ್ಟ್ರಪತಿ ಮತ್ತು ಕೇಂದ್ರ ಸಚಿವರು ವಿಷೇಷವಾಗಿ ಹಿಂದೆ ಭಾಷೆಯನ್ನು ಬಲ್ಲವರು ಹಿಂದಿ ಭಾಷೆಯಲ್ಲಿ ಭಾಷಣ ಮಾಡುವಂತೆ ಕೋರಲು ನಿರ್ಧರಿಸಲಾಗಿದೆ.
 
ಹಿಂದಿ ಮತ್ತು ಆಂಗ್ಲ ಭಾಷೆಯ ಕುರಿತಂತೆ ಸಂಸದೀಯ ಸಮಿತಿ ಸಲ್ಲಿಸಿದ ಶಿಫಾರಸ್ಸುಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಹುತೇಕ ಒಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ