ಬಿಜೆಪಿ ಹಾಗೂ ಯುಪಿಎ ದಲಿತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗೆ ದಲಿತರಿಬ್ಬರು ಸ್ಪರ್ಧಿಸುತ್ತಿದ್ದಾರೆ ಎಂಬ ವ್ಯಾಪಕ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡಿರುವ ಮೀರಾ ಕುಮಾರ್ ಹಲವರು ಅಭ್ಯರ್ಥಿಗಳಿಗಿರುವ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಬಿಟ್ಟು ಕೇವಲ ಅವರ ಜಾತಿಯ ಕುರಿತು ಚಿಂತಿಸುತ್ತಿದ್ದಾರೆ. ಇದು ಸಮಾಜದ ನೈಜ ಮನಸ್ಥಿತಿಯನ್ನು ಪ್ರತಿಧ್ವನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯ, ಸಾಮಾಜಿಕ ನ್ಯಾಯ, ಸಮಾನತೆ ಸಿದ್ಧಾಂತದ ಆಧಾರದ ಮೇಲೆ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದ್ದು, ಗುಜರಾತಿನ ಶಬರಮತಿ ಆಶ್ರಮದಿಂದ ಚುನಾವಣಾ ಪ್ರಚಾರ ಆರಂಭಿಸುವುದಾಗಿ ತಿಳಿಸಿದ್ದಾರೆ.