ಯೋಧರ ತ್ಯಾಗ, ಬಲಿದಾನ ಕೊಂಡಾಡಿದ ಪ್ರಧಾನಿ ಮೋದಿ

ಶುಕ್ರವಾರ, 3 ನವೆಂಬರ್ 2023 (07:48 IST)
ಯೋಧರು ದೇಶಕ್ಕಾಗಿ ಮಾಡುವ ತ್ಯಾಗ, ಬಲಿದಾನಗಳನ್ನು ಮನಸಾರೆ ಕೊಂಡಾಡಿದ ಅವರು, ಯೋಧರು ಸದಾ ನಮ್ಮನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿರುತ್ತಾರೆ. ಅವರಿಂದಾಗಿ ನಾವು ದೀಪಾವಳಿಯನ್ನು ನಿರಾತಂಕವಾಗಿ ಆಚರಿಸಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ನಮ್ಮ ಯೋಧರಿಗೆ ಧನ್ಯವಾದಗಳನ್ನು ಹೇಳಲೇ ಬೇಕು ಎಂದ  ಪ್ರಧಾನಿ ಮೋದಿ ದೇಶಕ್ಕೆ ಕರೆ ನೀಡಿದ್ದಾರೆ.
 
ದೀಪಾವಳಿಯನ್ನು ಗಡಿಯಲ್ಲಿ ನಮ್ಮ ದೇಶವನ್ನು ಕಾಯುವ ಸೇನಾ ಯೋಧರಿಗೆ ಸಮರ್ಪಿಸೋಣ.  ಪಟಾಕಿಯಿಂದ ಸಂಭವಿಸುವ ಅನಾಹುತಗಳಿಗೆ ಕಳವಳ ವ್ಯಕ್ತ ಪಡಿಸಿದ ಅವರು, ಪಟಾಕಿಯಿಂದ ಸಂಭವಿಸುವ ಅವಘಡ ಮಕ್ಕಳ ಭವಿಷ್ಯಕ್ಕೆ ಅಂಧಕಾರ ತರಬಹುದು, ಪೋಷಕರು ಎಚ್ಚರದಿಂದಿರಬೇಕು ಎಂದರು.
 
ಮುಂದುವರೆದು ಕೇರಳ ಬಯಲು ಶೌಚಾಲಯ ಮುಕ್ತ ರಾಜ್ಯವಾಗುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದ ಅವರು  ತಮ್ಮ ರಾಜ್ಯವನ್ನು ಬಯಲು ಶೌಚ ಮುಕ್ತ ಗೊಳಿಸುವ ಧ್ಯೇಯದೊಂದಿಗೆ ಮುನ್ನುಗ್ಗುತ್ತಿರುವ ಕೇರಳದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.
 
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಸ್ಮರಿಸಿಕೊಂಡ ಅವರು, ಸರ್ದಾರ್ ಪುಣ್ಯ ತಿಥಿ ದಿನವನ್ನು ರಾಷ್ಟ್ರೀಯ ಏಕತಾ ದಿವಸವೆಂದು ಆಚರಿಸಲಾಗುವುದು. ದೇಶದ ಏಕತೆಗಾಗಿ ಎಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ