ಯುಎಇನ 'ಝಾಯೆದ್ ಮೆಡಲ್' ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಪ್ರಧಾನಿ ಮೋದಿ

ಶುಕ್ರವಾರ, 5 ಏಪ್ರಿಲ್ 2019 (13:04 IST)
ನವದೆಹಲಿ : ಪ್ರಧಾನಿ ಮೋದಿಗೆ ಯುಎಇನ 'ಝಾಯೆದ್ ಮೆಡಲ್' ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಯುಕೆ ರಾಣಿ ಎಜಿಜಬೆತ್ 2 ಅವರಿಗೆ ಝಾಯೆದ್ ಮೆಡಲ್' ಅನ್ನು ನೀಡಲಾಗಿತ್ತು. ಈ ಬಾರಿ ಈ ಪುರಸ್ಕಾರ ಪ್ರಧಾನಿ ಮೋದಿ ಅವರಿಗೆ ದೊರಕಿದೆ.



ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌, ' ನಮ್ಮ ಆತ್ಮೀಯ ಗೆಳೆಯರಾದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಡುವಿನ ಸಂಬಂಧಗಳನ್ನು ವೃದ್ಧಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ' ಹೀಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ