4 ವರ್ಷದ ಬಾಲಕಿಯನ್ನ ಕಂಡು ಭದ್ರತೆ ಬದಿಗೊತ್ತಿ ಕಾರು ನಿಲ್ಲಿಸಿದ ನರೇಂದ್ರ ಮೋದಿ.. ಚಕಿತರಾದ ಜನ

ಸೋಮವಾರ, 17 ಏಪ್ರಿಲ್ 2017 (18:04 IST)
ಪ್ರಧಾನಮಂತ್ರಿ ನರೇಂದ್ರಮೋದಿ ತಮ್ಮ ಸರಳತೆಯಿಂಸ ಸೂರತ್ ನಗರದ ಜನರನ್ನ ಚಕಿತಗೊಳಿಸಿದ್ದಾರೆ. 4 ವರ್ಷದ ಬಾಲಕಿಯೊಬ್ಬಳು ಮೋದಿ ಇದ್ದ ಕಾರಿನ ಕಡೆ ಓಡಿ ಬರುತ್ತಿದ್ದಳು. ಎಸ್`ಪಿಜಿ ಸಿಬ್ಬಂದಿ ಆಕೆಯನ್ನ ತಡೆಯಲೆತ್ನಿಸಿದರು. ಇದನ್ನ ಗಮನಿಸಿದ ಪ್ರಧಾನಿ ನರೇಂದ್ರಮೋದಿ, ಕಾರು ನಿಲ್ಲಿಸಿ ಆಕೆಯನ್ನ ಸಮೀಪಕ್ಕೆ ಕರೆಸಿಕೊಂಡಿದ್ದಾರೆ.
 

ಭದ್ತತಾ ಸಿಬ್ಬಂದಿ ಹೈ ಸೆಕ್ಯೂರಿಟಿಯ ನಡುವೆಯ ಕಾರಿನ ಬಾಗಿಲು ತೆರೆದು ಬಾಲಕಿ ನ್ಯಾನ್ಸಿ ಗೊಂಡಾಲಿಯಾಳನ್ನ ಎತ್ತಿ ಮೋದಿಯ ಕೈಗೆ ಕೊಟ್ಟಿದ್ದಾರೆ. ಬಾಲಕಿಯನ್ನ ಮುದ್ದಾಡಿದ ಮೋದಿ, ಕೆನ್ನೆ ಸವರಿ ನಗುತ್ತಾ ಕೈಗೆ ಕಟ್ಟಿರುವುದು ಏನೆಂದು ಕೇಳಿದ್ದಾರೆ. ಇದಕ್ಕೆ ನ್ಯಾನ್ಸಿ ಇದು ವ್ರಿಸ್ಟ್ ವಾಚ್ ಎಂದು ಉತ್ತರಿಸಿದ್ದಾಳೆ. ಈಗ ೆಷ್ಟು ಸಮಯ ೆಂದು ಮೋದಿ ಮರು ಪ್ರಶ್ನೆ ಹಾಕಿದ್ದಾರೆ. ಹೀಗೆ ಮೋದಿ ಮತ್ತು ಬಾಲಕಿಯ ಸಂಭಾಷಣೆ ಕೇಳುತ್ತಿದ್ದ ಸಮೀಪದ ಜನ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ.

`ದೇಶದ ಪ್ರಧಾನಿ ಭದ್ರತೆಯನ್ನೂ ಲೆಕ್ಕಿಸದೇ ಮಧ್ಯ ದಾರಿಯಲ್ಲಿ ಮಗುವಿಗಾಗಿ ಕಾರು ನಿಲ್ಲಿಸಿದ್ದು ನಿಜವಾಗಿಯೂ ಸಂತಸದ, ಅವಿಸ್ಮರಣೀಯ ಕ್ಷಣ. ನಿಜಕ್ಕೂ ನಂಬಲಸಾಧ್ಯವಾದ ಘಳಿಗೆ ಎಂದು ಕೌನ್ಸಿಲರ್ ಜಯಂತಿಲಾಲ್ ಭಂದೇರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ