ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ತಮ್ಮ 66ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನವನ್ನು ಅವರು ಗುಜರಾತ್ನ ಬುಡಕಟ್ಟು ಜನಾಂಗ ಮತ್ತು ದಿವ್ಯಾಂಗರ ಜತೆ ಆಚರಿಸಲು ನಿರ್ಧರಿಸಿದ್ದಾರೆ.
ಪ್ರತಿವರ್ಷದಂತೆ ಮೊದಲು ಗಾಂಧಿನಗರಕ್ಕೆ ತೆರಳಿ ತಾಯಿ ಹೀರಾಬಾಯಿ ಅವರನ್ನು ಭೇಟಿಯಾಗಿ, ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆದು ಬಳಿಕ ಅವರು ಬುಡಕಟ್ಟು ಜಿಲ್ಲೆ ದಾಹೋದ್ಗೆ ತೆರಳಿ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅನೇಕ ಹಿಂದುಳಿದ ಗ್ರಾಮಗಳಿಗೆ ನೀರುಣಿಸುವುದು ಈ ಯೋಜನೆ ಉದ್ದೇಶ.
ಮಧ್ಯಾಹ್ನ ನವಸಾರಿ ನಗರದಲ್ಲಿ ದಿವ್ಯಾಂಗರ ಜತೆ ಕಳೆದು ಅವರಿಗೆ ಅನುಕೂಲಕರವಾದ ಕಿಟ್ಸ್ ಮತ್ತು ಸಾಧನಗಳನ್ನು ಹಂಚಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ