ಸಾರ್ಕ್ ಸಭೆಗೆ ಮೋದಿ ಗೈರು

ಮಂಗಳವಾರ, 20 ಸೆಪ್ಟಂಬರ್ 2016 (08:58 IST)
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆ ಉಗ್ರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಮುಂದಿನ ತಿಂಗಳು ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿಲ್ಲ. ಸರ್ಕಾರದ ಮೂಲಗಳು ಇದನ್ನು ಸ್ಪಷ್ಟಪಡಿಸಿವೆ. 

 
ಆದರೆ ದಾಳಿಗೂ ಮೊದಲೇ ಪ್ರಧಾನಿ ಬದಲು ಪ್ರತಿನಿಧಿಯಾಗಿ ಬೇರೆ ಸಚಿವರನ್ನು ಕಳಿಸುವ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಕುರಿತು ಸಭೆಯ ದಿನ ಹತ್ತಿರ ಬಂದಂತೆ ನಿರ್ಧರಿಸಲಾಗುವುದು ಎಂದು ತಿಳಿದು ಬಂದಿದೆ.
 
ಬಾಂಗ್ಲಾ ಮತ್ತು ಅಪಘಾನಿಸ್ತಾನಗಳು ಸಹ ಸಾರ್ಕ್ ಶೃಂಗ ಸಭೆಗೆ ಹಾಜರಾಗುತ್ತಿಲ್ಲ.
 
ಕಳೆದ ಭಾನುವಾರ ಕಾಶ್ಮೀರದ ಉರಿ ಸೇನಾ ನೆಲೆಯಲ್ಲಿ ದಾಳಿ ನಡೆಸಿದ್ದ ಉಗ್ರರು 20 ಸೈನಿಕರ ಸಾವಿಗೆ ಕಾರಣರಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ