ಕೊರೊನಾ ರೋಗಿಗಳಿಗಾಗಿ 50 ಸಾವಿರ ವೆಂಟಿಲೇಟರ್ ಖರೀದಿಗೆ ಪ್ರಧಾನಿ ತೀರ್ಮಾನ

ಗುರುವಾರ, 18 ಜೂನ್ 2020 (09:30 IST)
Normal 0 false false false EN-US X-NONE X-NONE

ನವದೆಹಲಿ : ಕೊರೊನಾ ರೋಗಿಗಳಿಗೆ ವೆಂಟಿಲೇಟರ್ ಸಮಸ್ಯೆಯಾಗದಂತೆ 50 ಸಾವಿರ ವೆಂಟಿಲೇಟರ್ ಖರೀದಿ ಮಾಡಲು  ಪ್ರಧಾನಿ ತೀರ್ಮಾನ ಮಾಡಿದ್ದಾರೆ.

 

ಪಿಎಂ ಕೇರ್ ನಿಧಿಯಿಂದ ವೆಂಟಿಲೇಟರ್ ಖರೀದಿಗೆ ತೀರ್ಮಾನ ಮಾಡಿದ್ದು, ವೆಂಟಿಲೇಟರ್ ಖರೀದಿಗೆ 2 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿದೆ. 30 ಸಾವಿರ ವೆಂಟಿಲೇಟರ್ ಪೂರೈಕೆ ಮಾಡುವಂತೆ ಬಿಇಎಲ್ . ಮೈಸೂರಿನ ಸ್ಕ್ಯಾನ್ ರೇ ಟೆಕ್ನಾಲಜಿ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದೆ.

 

ಈಗಾಗ್ಲೆ ಸಾವಿರಾರು ವೆಂಟಿಲೇಟರ್ ಗಳು ಸರ್ಕಾರಕ್ಕೆ ಪೂರೈಕೆ ಆಗಿದ್ದು, ಅಗಸ್ಟ್ ಅಂತ್ಯದ ವೇಳೆಗೆ ಎಲ್ಲ ವೆಂಟಿಲೇಟರ್ ಗಳ ಪೂರೈಕೆ ಆಗಲಿದೆ ಎನ್ನಲಾಗಿದೆ. ಪಿಎಂ ಕೇರ್ ನಿಧಿಯ ವೆಂಟಿಲೇಟರ್ ಎಲ್ಲಾ ರಾಜ್ಯಗಳಿಗೆ ನೀಡಿಕೆ ಮಾಡಲಾಗುವುದು. 30 ಸಾವಿರ ಮೇಡ್ ಇನ್ ಇಂಡಿಯಾ ವೆಂಟಿಲೇಟರ್ ಡಿಸೈನ್ ಅಪ್ ಗ್ರೇಡ್ ಗೆ ಡಿಆರ್ ಡಿಒ ನೆರವು ನೀಡಲಿದೆ ಎನ್ನಲಾಗಿದೆ.  

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ