ಪ್ರಿಯಾಂಕರೆಡ್ಡಿ ಅತ್ಯಾಚಾರ, ಕೊಲೆ ಕೇಸ್; ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಶ್ಲಾಘನೆ
ಶುಕ್ರವಾರ, 6 ಡಿಸೆಂಬರ್ 2019 (10:23 IST)
ಹೈದರಾಬಾದ್ : ಪ್ರಿಯಾಂಕರೆಡ್ಡಿ ಅತ್ಯಾಚಾರ, ಕೊಲೆ ಕೇಸ್ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರ ಕಾರ್ಯಕ್ಕೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಶ್ಲಾಘನಿಸಿದ್ದಾರೆ.
ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಇಂದು ಮುಂಜಾನೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶವೇ ಸಂಭ್ರಮ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಅತ್ಯಾಚಾರಿ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದು ಸ್ವಾಗತಾರ್ಹ. ಯುಪಿ ಪೊಲೀಸರು ಹೈದರಾಬಾದ್ ಪೊಲೀಸರಈ ದಕ್ಷತೆ ಅನುಸರಿಸಲಿ. ಉನ್ನಾವೋ ಕೇಸ್ ಆರೋಪಿಗಳಿಗೂ ಶಿಕ್ಷೆ ಆಗಲಿ. ಸಂತ್ರಸ್ತರಿಗೆ ಬೆಂಕಿ ಹಚ್ಚಿದವರಿಗೂ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.